ಸಿದ್ಧಾಪುರ : ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ನಾಪತ್ತೆಯಾದ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಲೂಕಿನ ಶಿರಳಗಿಯ ನವೀನ ವೀರಭದ್ರ ನಾಯ್ಕ (14) ನಾಪತ್ತೆಯಾದ ವಿದ್ಯಾರ್ಥಿ, ಈತ ಬಿಕ್ಕಳಸೆ ಹತ್ತಿರವಿರುವ ಶಿರಳಗಿ ಹೈಸ್ಕೂಲ್ ನಲ್ಲಿ 8ನೇ ತರಗತಿ ವಿದ್ಯಾರ್ಥಿಯಾಗಿದ್ದು ಈತನು ಸೈಕಲ್ ಹೊಡೆಯುವ ಮತ್ತು ಮೊಬೈಲ್ ನೋಡುವ ಹವ್ಯಾಸವನ್ನು ಬೆಳಸಿಕೊಂಡಿದ್ದನು. ಕಳೆದ ಒಂದು ವಾರದಿಂದ ಕೊವಿಡ್ ಪಾಸಿಟಿವ್ ಬಂದಿರುದರಿAದ ಮನೆಯಲ್ಲೆ ಇದ್ದ ಈತ ಪೆ. 3 ರಂದು ಮನೆಯಿಂದ ಕಾಣೆಯಾಗಿದ್ದಾನೆ.
ಮನೆಯಲ್ಲಿ ಮಗಳು ಹಾಗೂ ಆತನ ಸೈಕಲ್ ಇಲ್ಲದೆ ಇರುವುದನ್ನು ಗಮನಸಿದ ಆತನ ತಂದೆ ಎಲ್ಲ ಕಡೆ ಹುಡುಕಾಡಿ ಪತ್ತೆಯಾಗದೇ ಇದ್ದಾಗ ಯಾರೋ ಅಪಹರಣ ಮಾಡಿರಬಹುದು ಎಂಬ ಸಂಶಯ ವ್ಯಕ್ತಪಡಿಸಿ ಸ್ಥಳೀಯ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕಾಣೆಯಾದ ಬಾಲಕನು 4 ಅಡಿ, 4 ಇಂಚು ಎತ್ತರ, ಬೆಳ್ಳನೆಯ ಮೈ ಬಣ್ಣ, ಸಾಧಾರಣ ಮೈಕಟ್ಟು, ನೀಲಿಬಣ್ಣದ ಹಾಫ್ ತೋಳಿನ ಟಿ – ಶರ್ಟ್ ನೇರಳೆ ಒಣ್ಣದ ನೈಟ್ ಪ್ಯಾಂಟ್ ಧರಿಸಿ ಶಿಕ್ಷಣ ಇಲಾಖೆಯಿಂದ ನೀಡಿದ ನೀಲಿಬಣ್ಣದ ಸೈಕಲ್ ತೆಗೆದುಕೊಂಡು ಹೋಗಿದ್ದಾನೆ ಎಂದು ತಿಳಿಸಲಾಗಿದೆ.
Leave a Comment