ಹೊನ್ನಾವರ : ಕಳೆದ ಒಂದು ತಿಂಗಳಿAದ ಅಪ್ಸರಕೊಂಡ ಕಾಸರಕೋಡ ಕಡಲತೀರಗಳಲ್ಲಿ ಕಡಲಾಮೆಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪುತ್ತಿದ್ದು, ಮೀನುಗಾರರು ಕಡಲಾಮೆ ರಕ್ಷಣೆಗಾಗಿ ಹಾಗೂ ಅದರ ಮರಣದ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.
ಜನವರಿ ತಿಂಗಳಿನಿAದ ಇಲ್ಲಿಯವೆಗೆ 5 ಕಡಲಾಮೆಗಳು ಮೃತಪಟ್ಟಿವೆ. ಸೋಮವಾರ ಸಂಜೆ ಇಕೋ ಬೀಚ್ ಕಡಲತೀರದಲ್ಲಿ ಬ್ರಹದಾಕಾರದ ಕಡಲಾಮೆ ಕಳೇಬರ ಪತ್ತೆಯಾಗಿತ್ತು. ಮಂಗಳವಾರ ಮುಂಜಾನೆ ಅಪ್ಸರಕೊಂಡ ಕಡಲತೀರದಲ್ಲಿ ಮತ್ತೊಂದು ಆಮೆ ಗಾಯಗೊಂಡು ಮೃತಪಟ್ಟಿರುವುದು ಪತ್ತೆಯಾಗಿದೆ.
ಒಂದೆಡೆ ಕಡಲಾಮೆಗಳ ಸರಣಿ ಸಾವು ಮೀನುಗಾರಿಕೆ ಅನುಮಾನ ಹಾಗೂ ಆತಂಕ ಸೃಷ್ಟಿಸಿದರೆ ಈ ಸಾವುಗಳು ಸಹಜವೋ ಅಥವಾ ಉದ್ದೇಶಪೂರ್ವಕವಾಗಿ ಆಮೆಗಳ ಮಾರಣ ಹೋಮ ನಡೆಸಲಾಗುತ್ತಿದೆಯೋ ಎನ್ನುವುದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಕಡಲಾಮೆ ಮೊಟ್ಟೆ ಇಟ್ಟಾಗ ಮಿನುಗಾರರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಅದರ ರಕ್ಷಣೆ ಮಾಡುತ್ತಾ ಬಂದಿದ್ದರು ಆದರೆ ಕಳೆದ ತಿಂಗಳಿAದ ಆಮೆಗಳ ಸರಣಿ ಸಾವುಗಳ ಹಿಂದಿನ ಮರ್ಮದ ಬಗ್ಗೆ ಮಾಹಿತಿ ಕಲೆಹಾಕುವ ಪ್ರಯತ್ನ ನಡೆಸುತ್ತಿದ್ದಾರೆ.
Leave a Comment