ಯಲ್ಲಾಪುರ : .ಯಾರೊಬ್ಬರೂ ವಿದ್ಯೆಯಿಂದ ವಂಚಿತರಾಗಬಾರದೆAದು ಸರಕಾರ ಊಟ ,ವಸತಿ ನೀಡಿ ನಿಮಗೋಸ್ಕರ ಇಷ್ಟೇಲ್ಲಾ ಸೌಲಭ್ಯ ನೀಡಿದೆ. ಜಾತಿ, ಧರ್ಮ ವನ್ನು ಒಳ್ಳೆಯದಕ್ಕೆ ಬಳಸಿಕೊಳ್ಳಿ ವಿವಾದಕ್ಕಲ್ಲ ಯಾವದೇ ವದಂತಿಗಳಿಗೆ ಕಿವಿಗೊಡದೇ ನಿಮ್ಮ ವಿದ್ಯಾಭ್ಯಾಸದೆಡೆ ಮಾತ್ರ ಗಮನಹರಿಸಿ ಎಂದು ಪೋಲಿಸ್ ಸಿಬ್ಬಂದಿ ನೀಲಮ್ ಮೋರೆ ಹೇಳಿದರು
ಅವರು ಪಟ್ಟಣದ ದೇವರಾಜ ಅರಸು ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ವಿವಾದವೆದ್ದಿರುವ ಪ್ರಚಲಿತ ವಿದ್ಯಮಾನಗಳ ತಿಳಿ ಹೇಳಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು. ಹಾಗೂ ಕೆಲವು ಮಕ್ಕಳು ಕಿಡಿಗೇಡಿತನ ಮಾಡುತ್ತಿರುವುದರ ಕುರಿತು ದೂರು ಬಂದ ಹಿನ್ನಲೆ ಅವರಿಗೆ ಬುದ್ಧಿವಾದ ಹೇಳಿ ಅಲ್ಲಿ ಸರಿಯಾಗಿ ಊಟ ,ಸುರಕ್ಷಾ ಕ್ರಮಗಳ ಕುರಿತು ವಿಚಾರಿಸಿದರು.ಈ ಸಂದರ್ಭದಲ್ಲಿ ವಾರ್ಡನ ಎಸ್.ಎ ನಧಾಫ್ ಸಿಬ್ಬಂದಿಗಳು ಇದ್ದರು.
Leave a Comment