ಹಳಿಯಾಳ ನಗರ ಶ್ರೀ ಕ್ಷೇತ್ರ ಉಳವಿಯ ಶ್ರೀಚನ್ನಬಸವೇಶ್ವರ ಹೆಬ್ಬಾಗಿಲು ಎಂದು ಪ್ರಸಿದ್ದಿಯಲ್ಲಿದೆ . ಹಳಿಯಾಳ ನಗರದ ಪ್ರವೇಶದಲ್ಲಿರುವ ಶ್ರೀ ಚನ್ನಬಸವೇಶ್ವರರ ಮಹಾದ್ವಾರಕ್ಕೆ ಬಹು ದಿನಗಳಿಂದ ವಿದ್ಯುತ್ ಸಂಪರ್ಕವಿರಲಿಲ್ಲ .
ಇದರಿಂದಾಗಿ ಮಹಾದ್ವಾರದ ಸೊಬಗು ರಾತ್ರಿ ವೇಳೆಯಲ್ಲಿ ಸೊರಾಗಿದಂತಾಗಿತ್ತು. ಇದನ್ನು ಅರಿತ ಪುರಸಭಾ ಸದಸ್ಯ ಉದಯ ಹೂಲಿ ವಿಶೇಷ ಆಸಕ್ತಿ ವಹಸಿ ಚನ್ನಬಸವೇಶ್ವರ ಮಹಾದ್ವಾರಕ್ಕೆ ವಿದ್ಯುತ್ ಅಲಂಕಾರವನ್ನು ಪುರಸಭೆ ಯಿಂದ ನಿರಂತರವಾಗಿರುವಂತೆ ಮಾಡಿಸಿದ್ದಾರೆ.
ಈ ಕಾರ್ಯಕ್ಕೆ ಸಹಕರಿಸಿದ ಪುರಸಭೆ ಅಧ್ಯಕ್ಷ ಅಜರ ಬಸರಿಕಟ್ಟಿ, ಉಪಾಧ್ಯಕ್ಷ ರಾದ ಶ್ರೀಮತಿ ಸುವರ್ಣಾ ಮಾದರ, ಮುಖ್ಯಾಧಿಕಾರಿ ವೆಂಕಟೇಶ ನಾಗನೂರ ಹಾಗೂ ಎಲ್ಲ ಪುರಸಭೆ ಸದಸ್ಯರಿಗೆ ಶ್ರೀ ಚನ್ನಬಸವೇಶ್ವರರ ಭಕ್ತರ ಪರವಾಗಿ ಹಳಿಯಾಳದ ಸಮಸ್ತ ನಾಗರಿಕರ ಪರವಾಗಿ ಅನಂತ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಈ ಕಾರ್ಯದ ರೂವಾರಿಗಳಾದ ಉದಯ ಹೂಲಿ ಹಾಗೂ ಶ್ರೀಮತಿ ರಾಜೇಶ್ವರಿ ಹೀರೆಮಠ ಇವರುಗಳು ಇನ್ನೂ ಇಂತಹ ಕಾರ್ಯಗಳನ್ನು ಮಾಡಲಿ ಎಂದು ಹಳಿಯಾಳ ಜನತೆ ಹಾರೈಸಿದ್ದಾರೆ.
Leave a Comment