ಯಲ್ಲಾಪುರ: ಸಂತ ಸೇವಾಲಾಲ ಮಹಾರಾಜರು ಕೇವಲ ಬಂಜಾರ ಜನಾಂಗಕ್ಕೆ ಮಾತ್ರ ಸೀಮಿತವಾಗಿರದೇ , ಇಡಿ ಮನುಕುಲಕ್ಕೆ ಆದರ್ಶವಾಗಿದ್ದಾರೆ, ಅವರ ತತ್ವಗಳು, ಸಂದೇಶಗಳು, ಇಡಿ ಮನುಕುಲಕ್ಕೆ ಮಾದರಿಯಾಗಿವೆ ಎಂದು ತಹಶೀಲ್ದಾರ ಶ್ರಿ ಕೃಷ್ಣ ಕಾಮಕರ್ ಹೇಳಿದರು.ಅವರು ಮಂಗಳವಾರ ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ಶ್ರೀ ಸಂತ ಸೇವಾಲಾಲ ಮಹಾರಾಜರ ೨೮೩ನೇ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಬುದ್ದ, ಬಸವ ರಂತೆ ಸೇವಾಲಾಲರ ವಿಚಾರಗಳು, ಸಹಿತ ಸಮಾಜದಲ್ಲಿ ಒಳ್ಳೆ ಸಂದೇಶವನ್ನು ಸಾರುತ್ತವೆ, ನಾವೆಲ್ಲರೂ ಸಂತರ ವಿಚಾರಗಳನ್ನು ಮಾತಿಗಿಂತ ಕೃತಿಯಲ್ಲಿ ತಂದರೆ ಇಡಿ ವಿಶ್ವದಲ್ಲಿ ಶಾಂತಿ ನೆಲೆಸುತ್ತದೆ ಎಂದರು. ಶಿಕ್ಷಕ ಗಂಗಾಧರ ಎಸ್ ಲಮಾಣಿ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಗ್ರೇಡ -೨ ತಹಶೀಲ್ದಾರ ಸಿ.ಜಿ ನಾಯ್ಕ, ತಾಲೂಕಾ ವೈದ್ಯಾಧಿಕಾರಿ ಡಾ:ನರೇಂದ್ರ ಪವಾರ, ಬಂಜಾರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶಂಕರ ನಾಯಕ, ಸಮಾಜದ ಮುಖಂಡರಾದ ಈಶ್ವರ ರಾಠೋಡ, ರಮೇಶ ಲಮಾಣಿ,ದೇವರು ರಾಠೋಡ,ಮಾಲತೇಶ ಲಮಾಣಿ, ಹಾಗೂ ಸಮಾಜ ಬಾಂಧವರು, ವಿವಿದ ಇಲಾಖೆಯ ಅಧಿಕಾರಿಗಳು ಮುಂತಾದವರು ಇದ್ದರು.
Leave a Comment