ಯಲ್ಲಾಪುರ;
ಪಟ್ಟಣ ರವೀಂದ್ರನಗರದ ಮಹಿಳಾ ಸಭಾಭವನದಲ್ಲಿ ಜೆಡಿಎಸ್ ಪಕ್ಷದ ಸಂಘಟನೆಯ ಕುರಿತು ಪಕ್ಷದ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು” ರೈತರ,ಸಾಮಾನ್ಯ ಜನರ ಹಿತ ಕಾಯುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಫಲವಾಗಿವೆ. ಜೆಡಿಎಸ್ ಪಕ್ಷ ಮಾತ್ರ ಜನಪರ ರೈತಪರ ನಿಲುವು ಹೊಂದಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಅವಧಿಯಲ್ಲಿ ಮಾಡಿರುವ ಕೆಲಸ ಕಾರ್ಯಗಳು ಇಂದಿಗೂ ಜನ ಸಮಾಜದ ದಲ್ಲಿ ಅಚ್ಚಳಿಯದೇ ಉಳಿದಿದೆ.ಗ್ರಾಮವಾಸ್ತವ್ಯ,ಜನತಾ ದರ್ಶನ, ರೈತರ ಸಾಲ ಮನ್ನಾ,ಗ್ರಾಮೀಣ ಶಿಕ್ಷಣಕ್ಕೆ ಒತ್ತು,ಸಾರ್ವಜನಿಕ ಆಸ್ತಿಪಾಸ್ತಿ ಕಬಳಿಕೆ ಮುಟ್ಟುಗೋಲು ಹಾಕಿದ್ದು,ಹೀಗೆ ಬಡವರ,ಶ್ರಮಿಕವರ್ಗದ ಪರ ಕಾರ್ಯಕ್ರಮಗಳು ಜೆಡಿಎಸ್ ಸಂಘಟನೆಗೆ ಶ್ರೀರಕ್ಷೆಯಾಗಿದೆ.ಇದನ್ನು ಕಾರ್ಯಕರ್ತರು ಮನದಟ್ಟ ಮಾಡಿ ಕೊಡುವ ಮೂಲಕ ಪಕ್ಷವನ್ನು ಪುನ: ತಳಮಟ್ಟದಿಂದ ಸಂಘಟಿಸಬೇಕೆಂದರು.”
ಜಿಲ್ಲಾ ಪದಾಧಿಕಾರಿಗಳಾದ ಪಿ.ಟಿ.ನಾಯ್ಕ ಹೊನ್ನಾವರ,ವಿ.ಎಂ.ಬಂಡಾರಿ,ರಮೇಶ ನಾಯ್ಕ ಕರ್ಕಿ,ಜಿಲ್ಲಾ ಅಲ್ಪಸಂಖ್ಯಾತ ಅಧ್ಯಕ್ಷ ಮುಜಿದ್ ಶೇಖ್,ತಾಲೂಕಾ ಅಲ್ಪಸಂಖ್ಯಾತ ಅಧ್ಯಕ್ಷ ಚಾಂದ್ ಶೇಖ್,ಕ್ಷೇತ್ರಾಧ್ಯಕ್ಷ ಸಂಗೂರಮಠ,ಸ್ಥಳಿಯ ಪ್ರಮುಖರಾದ ಹರೂಣ ಶೇಖ್ ಕಿರವತ್ತಿ,ಬಷೀರ ಗುರ್ನಾಳ,ಸೋಮೇಶ್ವರ ಗೌಡ ಕಬ್ಬೆ,ಶೇಖರ ನಾಯ್ಕ ಹಿತ್ಲಳ್ಳಿ,ರತ್ನಾಕರ ಶೇಟ್,ವಿನಾಯಕ ಭಟ್ಟ ಮಂಚಿಕೇರಿ,ಈಶ್ವರ ಪಟಗಾರ,ವಿಲ್ಸನ್ ಡಿಸೋಜಾ,ಜೈವಂತ ಹುಣಶೆಟ್ಟಿಕೊಪ್ಪ, ಇದ್ದರು. ಮುಖಂಡರಾದ ಬೆನಿತ್ ಸಿದ್ದಿ ನಿರೂಪಿಸಿದರು,ಸುಧಾಕರ ನಾಯ್ಕ ಮಂಚಿಕೇರಿ ವಂದಿಸಿದರು. ಉಪಸ್ಥಿತರಿದ್ದರು.ತಾಲೂಕಿನ ವಿವಿಧ ಭಾಗಗಳ ಕಾರ್ಯಕರ್ತರು ಪಾಲ್ಗೊಂದಿದ್ದರು
Leave a Comment