ಕಾರವಾರ : ಕಾರಿನಲ್ಲಿ ಸ್ಫೋಟಕ ವಸ್ತುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಸ್ಫೋಟಕ ಸಹಿತ ಇಬ್ಬರನ್ನು ವಶಕ್ಕೆ ಪಡೆದಿರುವ ಘಟನೆ ಕಾರವಾರ ನಗರದ ಲಂಡನ್ ಬ್ರಿಡ್ಜ್ ಬಳಿ ನಡೆದಿದೆ.
ಬಾಲಮುರುಗನ್, ಆನಂದ ನಾಯ್ಕ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರು ಅಕ್ರಮವಾಗಿ ಸ್ಫೋಟಕ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರಿಗೆ 84 ಜಿಲೆಟಿನ್ ಕಡ್ಡಿಗಳು, 4 ಇಲೆಕ್ಟಿçಕ್ ಡಿಟೋನೆಟರ್ ದೊರೆತಿದ್ದು ಅಕ್ರಮವಾಗಿ ಮತ್ತು ನಿರ್ಲಕ್ಷö್ಯ ತನದಿಂದ ಎಲ್ಲ ಸ್ಫೋಟಕಗಳನ್ನು ಒಟ್ಟಿಗೆ ಸಾಗಾಟ ಮಾಡುತ್ತಿರುವ ಕಾರಣ ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment