ಹೊನ್ನಾವರ : ಪಟ್ಟಣದ ಎಸ್ ಡಿ ಎಂ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ನಿಯೊಬ್ಬಳಿಗೆ ಅದೇ ಕಾಲೇಜಿನ ವಿದ್ಯಾರ್ಥಿಗಳು ನಿಂದನೆ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಸ್ನೇಹಿತರ ಮೇಲೆ ಹಲ್ಲೆ ಮಾಡಿದ್ದಾರೆಂದು ವಿದ್ಯಾರ್ಥಿನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಕೆಲ ದಿನಗಳಿಂದ ತನ್ನ ಬಗ್ಗೆ ವಿದ್ಯಾರ್ಥಿಯೋರ್ವ ಮತ್ತೋರ್ವ ವಿದ್ಯಾರ್ಥಿಯ ಬಳಿ ಕೆಟ್ಟ ಶಬ್ದಗಳಿಂದ ನಿಂದಿಸುತ್ತಿದ್ದ. ಈ ಬಗ್ಗೆ ಆ ಮತೋರ್ವ ವಿದ್ಯಾರ್ಥಿ ತನ್ನ ಗಮನಕ್ಕೆ ತಂದಿದ್ದ. ತನ್ನ ಸ್ನೇಹಿತರು ನಿಂದಿಸಿದ ವಿದ್ಯಾರ್ಥಿ ಬಳಿ ಈ ಬಗ್ಗೆ ಪ್ರಶ್ನೆ ಮಾಡಿ ಬುದ್ಧಿ ಹೇಳಿದ್ದರು.
ಆದರೆ ಗುರುವಾರ ಮಧ್ಯಾಹ್ನ ಕಾಲೇಜು ಬಳಿಯ ಬಸ್ ತಂಗುದಾಣಕ್ಕೆ ನಡೆದು ಕೊಂಡು ಹೋಗುತ್ತಿದ್ದಾಗ ನಿಂದಿಸಿದ್ದ ವಿದ್ಯಾರ್ಥಿ ಮತ್ತೀರ್ವರು ಬೆಂಬಲಿಗ ವಿದ್ಯಾರ್ಥಿಗಳೊಂದಿಗೆ ಬಂದು ತನ್ನ ಸ್ನೇಹಿತರನ್ನು ತಡೆದು ನಿಲ್ಲಿಸಿದ್ದಾರೆ.
ಆಕೆಯ ಬಗ್ಗೆ ಏನು ಬೇಕಾದರೂ ಮಾತನಾಡುತ್ತೇವೆ, ಅದನ್ನು ಕೇಳಲು ನೀವ್ಯರು ಎಂದು ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಹಲ್ಲೆ ಕೂಡ ನಡೆಸಿದ್ದಾರೆ. ಅಲ್ಲದೇ ಮುಂದೆ ಜೀವಂತವಾಗಿ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಕೂಡ ಒಡ್ಡಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿ ದೂರು ನೀಡಿದ್ದಾಳೆ.
Leave a Comment