
ಯಲ್ಲಾಪುರ ; ನಾವು ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರೆದರೂ ರಕ್ತವನ್ನು ಕೃತಕವಾಗಿ ಸೃಷ್ಠಿಸಲು ಇನ್ನೂವರೆಗೂ ಸಾಧ್ಯವಾಗಿಲ್ಲ. ಹೀಗಾಗಿ ರಕ್ತವನ್ನು ದಾನವಾಗಿ ಪಡೆಯಬೇಕಾಗಿದೆ. ಎಲ್ಲ ದಾನಕ್ಕಿಂತ ರಕ್ತದಾನ ಪ್ರೇರಣಾದಾಯಕ ಕಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹೇಳಿದರು.
ಅವರು ತಾಲೂಕಿನ ಉಮ್ಮಚಗಿ ಶ್ರೀಮಾತಾ ಸಂಸ್ಕೃತ ಮಹಾವಿದ್ಯಾಲಯ ಸಭಾ ಭವನದಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ, ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ, ತಾಲೂಕು ಆಸ್ಪತ್ರೆ ರಕ್ತ ಸಂಗ್ರಹಣಾ ಘಟಕ, ಐ.ಎಂ.ಎ ಲೈಫ್‌ಲೈನ್ ಬ್ಲಡ್ ಬ್ಯಾಂಕ್, ಪಂಡಿತ ಸಾರ್ವಜನಿಕ ಆಸ್ಪತ್ರೆ, ಶಿರಸಿ ಗ್ರೀನ್‌ಕೇರ್ ಯಲ್ಲಾಪುರ, ಶ್ರೀಮಾತಾ ಸಂಸ್ಕೃತ ವೈದಿಕ ಶಿಕ್ಷಣ ಸಂಸ್ಥೆ ಹಾಗೂ ಶ್ರೀಮಾತಾ ಸಂಸ್ಕೃತ ಮಹಾವಿದ್ಯಾಲಯ ಇದರ ಎನ್.ಎಸ್.ಎಸ್
ಘಟಕ ಇವರ ಸಂಯುಕ್ತ ಆಶ್ರಯದಲ್ಲಿ “ಸ್ವಯಂಪ್ರೇರಿತ ರಕ್ತದಾನ ಶಿಬಿರ” ಉದ್ಘಾಟಿಸಿ ಮಾತನಾಡಿದರು.ರಕ್ತದಾನ ಪ್ರಾಮುಖ್ಯತೆ ಅರಿತು ಹಲವಾರು ವರ್ಷದಿಂದ ರಕ್ತದಾನ ಆಯೋಜಿಸುತ್ತಿರುವ ಸಂಸ್ಥೆಯವರಿಗೆ ಹಾಗೂ ರಕ್ತದಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ಅವರು, ನಿರಂತರವಾಗಿ ರಕ್ತದಾನ ಶಿಬಿರ ಹೀಗೆ ಮುಂದುವರೆಯಲಿ , ಈ ಸಂಸ್ಕೃತ ಮಹಾವಿದ್ಯಾಲಯ ಸಾವಿರಾರು ವರ್ಷದ ಪರಂಪರೆಯನ್ನು ಮುಂದುವರೆಸಿಕೊAಡು ಹೋಗುತ್ತಿರುವ ಹೆಮ್ಮೆಯ ಸಂಗತಿ ಎಂದರು.
ಐಎಂಎ ಬ್ಲಡ್ ಬ್ಯಾಂಕ್ ನ ಡಾ.ಸುಮನ್ ಹೆಗಡೆ ಮಾತನಾಡಿ, ಸಮಾಜದಿಂದ ಹಲವಾರು ಪ್ರಯೋಜನ ಪಡೆದಿರುತ್ತೆವೆ. ಅದನ್ನು ಯಾವುದೇ ರೂಪದಲ್ಲಿ ಸಮಾಜಕ್ಕೆ ಮರಳಿ ಕೊಡಲು ಪ್ರಯತ್ನ ಹಾಗೂ. ನಮ್ಮೆಲರ ಜವಾಬ್ದಾರಿಯೂ ಆಗಬೇಕು. ಎಂದರು. ಶಿರಸಿ ಉಪವಿಭಾಗಾಧಿಕಾರಿ ಆರ್. ದೇವರಾಜ ,ತಹಶೀಲ್ದಾರ ಶ್ರೀಕೃಷ್ಣ ಕಾಮಕರ್, ತಾಲೂಕಾ ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ್, ಸಂಸ್ಥೆಯ ಪ್ರಾಚಾರ್ಯೆ ಡಾ.ಶರಾವತಿ ಭಟ್, ಸಂಸ್ಥೆಯ ಕಾರ್ಯದರ್ಶಿ ಎಲ್.ಜಿ.ಹೆಗಡೆ ಬೆದೆಹಕ್ಲೂ ಮುಂತಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಟಿ.ವಿ ಹೆಗಡೆ ಬೇದೆಹಕ್ಕಲು ಪ್ರಾಸ್ತಾವಿಕ ಮಾತನಾಡಿದರು. ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಟಿ ಭಟ್ಟ ನಿರ್ವಹಿಸಿದರು.
ಸಂಸ್ಕೃತ ವಿದ್ಯಾಲಯದ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
Leave a Comment