ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿಯ ಸರ್ವೋದಯ ಕ್ರೀಡಾಂಗಣದಲ್ಲಿ ಫೆ. 28 ರಂದು (ನಾಳೆ )ವಜ್ರಳ್ಳಿಯ ರಸೋತ್ಸವ ಸಮಿತಿಯು ಸಾಂಪ್ರದಯಿಕ ವಾದ ಆಲೆಮನೆ ಹಬ್ಬ ಹಮ್ಮಿಕೊಂಡಿದ್ಧು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಂಘಟನೆಯ ಪ್ರಮುಖ ವಿ ಎನ್ ಭಟ್ಟನಡಿಗೆಮನೆ, ಹೇಳಿದರು. ಅವರು ವಜ್ರಳ್ಳಿಯ ಆದರ್ಶ ಸೇವಾ ಸಹಕಾರಿ ಸಂಘದ ಆವರಣದಲ್ಲಿ ಆಲೆಮನೆ ಹಬ್ಬದ ಕುರಿತು ಮಾಹಿತಿ ನೀಡಿ ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಯಕ್ಷಗಾನ ದ ಬಡಗುತ್ತಿಟ್ಟಿನ ಖ್ಯಾತ ಭಾಗವತರಾದ ರಾಘವೇಂದ್ರ ಆಚಾರಿ ಜನ್ಸಾಲೆ, ಮತ್ತು ರಾಮಕೃಷ್ಣ ಹೆಗಡೆ ಹಿಲ್ಲೂರುರವರ ದ್ವಂದ್ವ ಹಾಡುಗಾರಿಕೆಗೆ ಎನ್ ಜಿ ಹೆಗಡೆಯವರ ಮದ್ದಳೆ,ಪ್ರಸನ್ನ ಹೆಗ್ಗಾರರ ಚಂಡೆವಾದನವಿದೆ. ಮುಮ್ಮೇಳದಲ್ಲಿ ಪ್ರಸಿದ್ಧ ಸ್ರ್ತೀ ವೇಷಧಾರಿ ನೀಲ್ಕೋಡು ಶಂಕರ ಹೆಗಡೆ ಮತ್ತು ಕಾರ್ತಿಕ ಕಣ್ಣಿಯವರ ಯಕ್ಷನೃತ್ಯವಿದೆ ಎಂದು ತಿಳಿಸಿದ್ದಾರೆ.
ಸಂಘಟನೆಯ ಮಹೇಶ ಗಾಂವ್ಕಾರ, ವಜ್ರಳ್ಳಿಯ ಗೆಳೆಯರ ಬಳಗದ ಅಧ್ಯಕ್ಷ ಸತೀಶ ಕುಂಬ್ರಿ, ಆದರ್ಶಸೇವಾ ಸಹಕಾರಿ ಸಂಘದ ಸದಸ್ಯರಾದ ವಿಘ್ನೇಶ್ವರ ಹೆಗಡೆ, ರವಿ ಭಟ್ಟ, ಬಿಡಾರ, ವ್ಯವಸ್ಥಾಪಕರಾದ ಜಿ ವಿ ಭಟ್ಟ, ಅಡ್ಕೇಮನೆ, ಹಾಗೂ ಸುಭಾಸ ಭಟ್ಟಗಿಡಗಾರಿ,ಶ್ರೀಕಾಂತ ಹೆಬ್ಬಾರ ಇರಾಪುರ,ಅಪ್ಪಣ್ಣ ಭಟ್ಟ, ಬೆಣ್ಣೆಜಡ್ಡಿ ಇದ್ದರು.
……. Yellapur news ; Join our whatsapp group
Leave a Comment