ಚಿರತೆಯೊಂದು ಮನೆಗೆ ನುಗ್ಗಿ ಆತಂಕವುAಟು ಮಾಡಿದ ಘಟನೆ ನಂಜನಗೂಡು ತಾಲೂಕಿನ ಯಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪೊದೆಗಳಲ್ಲಿ ಆಡಗಿದ್ದ ಸುಮಾರು ಎರಡು ವರ್ಷವಯಸ್ಸಿನ ಚಿರತೆ ರಾತ್ರಿ ವೇಳೆ ನಯಿಯೊಂದನ್ನುಅಟ್ಟಿಸಿಕೊAಡು ಬಂದಿದೆ. ನಾಯಿ ತಪ್ಪಿಸಿಕೊಂಡ ಹಿನ್ನಲೆಯಲ್ಲಿ ಚಿರತೆ ನೇರವಾಗಿ ಚನ್ನಪ್ಪ ಎಂಬುವವರ ಮನೆಗೆ ನುಗ್ಗಿದೆ.
ಆತಂಕಗೊAಡ ಕುಟುಂಬದವರು ಕೂಡಲೇ ಹೊರ ಓಡಿಹೋಗಿ ಹೊರಗಿನಿಂದ ಬಾಗಿಲು ಬಂದ್ ಮಾಡಿದ್ದಾರೆ.
ಈ ಸಮಯ ಆತಂಕಗೊAಡ ಚಿರತೆ ಕೋಣೆಯ ಎಲ್ಲಾ ಕಡೆ ಓಡಾಡಿದೆ. ಟಿವಿ ಸ್ಟಾö್ಯಂಡ್, ಮಂಚ ಇನ್ನಿತರ ಕಡೆಯೆಲ್ಲಾ ಗಾಬರಿಯಿಂದ ಹತ್ತಿಳಿದಿದೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸೆರೆ ಹಿಡಿದರು.
ಬಳಿಕ ಅದನ್ನು ಹೆಡಿಯಾಲ ಕಾಡಿನಲ್ಲಿ ಬಿಡಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Leave a Comment