ಮಾರಕಾಸ್ತç ಹಿಡಿದು ಒಳಪ್ರವೇಶಿಸಿರುವ ತಂಡ : ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆ
ಅಂಕೋಲಾ : ಹೆದ್ದಾರಿಗೆ ಹೊಂದಿಕೊAಡಿರುವ ಪೀಕಾಕ್ ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ ಲಕ್ಷಾಂತರ ರೂಪಾಯಿನಗದು ಮತ್ತು ಮಧ್ಯದ ಬಾಟಲಿ ಕಳವು ಮಾಡಿರುವ ಘಟನೆ ನಡೆದಿದೆ.
ಸೋಮವಾರ ರಾತ್ರಿ ವ್ಯಾಪಾರ ಮುಗಿಸಿ ಬಾರ್ ಬಂದ್ ಮಾಡಿ ಸಿಬ್ಬಂದಿ ಮೇಲಿನ ಮಹಡಿಯಲ್ಲಿರುವ ಕೋಣೆಯಲ್ಲಿ ಮಲಗಿದ್ದರು. ರೆಸ್ಟೋರೆಂಟ್ನ ಹಿಂದಿರುವ ಬಾಗಿಲಿನ ಜಾಳಿಗೆಯನ್ನು ಸರಿಸಿ, ಇನ್ನೊಂದು ಬಾಗಿಲನ್ನು ಒಡೆದು ಕಳ್ಳರು ಒಳಪ್ರೇಶಿಸಿದಂತೆ ಕಂಡುಬAದಿದ್ದು, ಕ್ಯಾಶ್ ಕೌಂಟರ್ ಬಳಿ ಬಂದು ಪೆಟ್ಟಿಗೆ ಒಡೆದು ಅಲ್ಲಿನ ನಗದು ಕಳ್ಳತನ ಮಾಡಿದ್ದಾರೆ.
ನಂತರ ಮಧ್ಯದ ಬಾಕ್ಸುಗಳನ್ನು ಸಂಗ್ರಹಿಸಿಟ್ಟ ಕೋಣೆಗೆ ನುಗ್ಗಿ ಕೆಲವು ಬಾಕ್ಸುಗಳನ್ನು ಕದ್ದೊಯ್ದಿರುವುದಾಗಿ ತಿಳಿದು ಬಂದಿದೆ. ಇಬ್ಬರು ಮುಸುಕುಧಾರಿಗಳು ಮಾರಕಾಸ್ತç ಹಿಡಿದು ಒಳ ಪ್ರವೇಶಿಸಿರುವುದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ಅಂಕೋಲಾ ಪಿಎಸ್ಐ ಪ್ರೇಮನಗೌಡ ಪಾಟೀಲ್ ತಂಡ ಜೊತೆಗೆ ಶ್ವಾನದಳ, ಬೆರಳಚ್ಚು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment