ಹಳಿಯಾಳದಲ್ಲಿ ದಿನಾಂಕ 05-03-2022 ರಂದು ಸಂಜೆ, ಈಶ್ವರಿಯ ವಿಶ್ವ ವಿದ್ಯಾಲಯ ಶಿವಾಜಿ ಗಲ್ಲಿಯಲ್ಲಿ ಶಿವರಾತ್ರಿ ಹಾಗೂ ಅಮೃತ ಮಹೋತ್ಸವದಿಂದ ಸ್ವರ್ಣಿಮ ಭಾರತ ಕಡೆಗೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಧ್ಯಕ್ಷ ಸ್ಥಾನ ದಿಂದ ರಾಜಯೋಗಿನಿ ಬಿಕೆ ಶೈಲಜಾ ಸಂಚಾಲಕರು ಹಾನಗಲ್ ಸೇವಾಕೇಂದ್ರ ಇವರು ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸರ್ವರಿಗೂ ಅವಶ್ಯಕವಾದ ಜೀವನ ಮೌಲ್ಯಗಳನ್ನು ಹೇಳಿಕೊಡಲಾಗುತ್ತದೆ ಸರ್ವರೂ ಇದರ ಪ್ರಯೋಜನ ಪಡೆಯಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಪುರಸಭೆಯ ಅಧ್ಯಕ್ಷರಾದ ಅಜರ ಬಸರಿಕಟ್ಟಿ ಯವರು ಪುರಸಭೆಯ ಪೌರಕಾರ್ಮಿಕರನ್ನು ಸನ್ಮಾನಿಸಿದ ಕಾರ್ಯವನ್ನು ಪ್ರಶಂಸಿಸಿದರು ಉಪ ಅಧ್ಯಕ್ಷರಾದ ಸುವರ್ಣ ಮಾದರ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಸ್ಥೆಗೆ ಬಂದ ತಕ್ಷಣ ಶಾಂತಿಯ ಅನುಭವವಾಯಿತು ಮನಸ್ಸಿನ ಒತ್ತಡ ದೂರವಾಯಿತು ಎಂದು ರಾಜಯೋಗದ ಮಹತ್ವವನ್ನು ತಿಳಿಸಿದರು ಈಶ್ವರೀಯ ವಿಶ್ವವಿದ್ಯಾಲಯದ ಹಿರಿಯ ಅನುಭವಿ ರಾಜಯೋಗಿ ಡಾಕ್ಟರ್ ವಿದ್ಯಾರಣ್ಯ ಐತಾಳ ಶಿವರಾತ್ರಿಯ ಆಧ್ಯಾತ್ಮಿಕ ರಹಸ್ಯವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿದ 16 ಜನ ಮಾಜಿ ಸೈನಿಕರು ಹಾಗೂ 56 ಜನ ಪೌರಕಾರ್ಮಿಕರು ತುಂಬಾ ಸಂತೋಷ ವ್ಯಕ್ತಪಡಿಸಿದರು ದುರ್ಗಾ ನಾಟ್ಯ ಕಲಾ ಸಂಘದಿಂದ ಸುಂದರವಾದ ನೃತ್ಯಗಳು ಹಾಗೂ ಮಂಜು ಡ್ಯಾನ್ಸ್ ಕ್ಲಾಸ್ ನ ಪೃಥ್ವಿ ಬಾಲಣ್ಣವರ ಹಾಗೂ ಭೂಮಿಕ ಗರಗ ಪ್ರದರ್ಶಿಸಿದ ಸಾಹಸಮಯ ನೃತ್ಯ ಎಲ್ಲರನ್ನು ಸಂತೋಷ ಪಡಿಸಿದವು. ಬಿಕೆ ಲಕ್ಷ್ಮಿ ಅಕ್ಕನವರು ಸ್ವಾಗತವನ್ನು ಕೋರಿದರು ವಕೀಲರಾದ ರಾಧಾರಾಣಿ ವಂದಿಸಿದರು ಹಳಿಯಾಳ ಸಂಚಾಲಕಿ ಡಾಕ್ಟರ್ ಬಿಕೆ ಪದ್ಮಅಕ್ಕನವರು ನಿರೂಪಣೆ ಮಾಡಿದರು.
ವರದಿ
ಮಂಜುನಾಥ. ಎಚ್. ಮಾದಾರ
ಹಳಿಯಾಳ
Haliyal News ; Join our whatsapp group
Leave a Comment