ಹೊನ್ನಾವರ : ಜಿಲ್ಲೆಯಲ್ಲಿ ಐಆರ್ ಬಿ ಕಂಪನಿ ಹೆದ್ದಾರಿ ಕಾಮಗಾರಿನಡೆಸುತ್ತಿದ್ದು, ಅವೈಜ್ಞಾನಿಕ ಕಾಮಗಾರಿಗಳು ಅಪಘಾತಕ್ಕೆ ಕಾರಣವಾಗುತ್ತದೆ.
ಸೋಮವಾರ ಪಟ್ಟಣದ ಶರಾವತಿ ಸೇತುವೆಯ ಮೇಲೆ ಬೈಕ್ ಹಾಗೂ ಕಾರು ನಡುವೆ ಸಂಭವಿಸಿದ ಅಪಘಾತ ತಾಲೂಕಿನಲ್ಲಿ ಹಿಂದೆAದೂ ಕಾಣದ ರೀತಿಯಲ್ಲಿ ಸಂಭವಿಸಿದ. ಸಿನಿಮೀಯ ರೀತಿಯಲ್ಲಿ ಅಪಘಾತ ಸಂಭವಿಸಿದ್ದು, ಮುಖಾಮುಖಿ ಡಿಕ್ಕಿ ಬಳಿಕ ಬೈಕ್‌ನಲ್ಲಿದ್ದ ಈರ್ವರು ಸೇತುವೆಯಿಂದ ಕೆಳಕ್ಕೆ ಬಿದ್ದಿರುವುದು ಕಾರು ಚಾಲಕನ ಅತಿವೇಗ ಹಾಗೂ ನಿಷ್ಕಾಳಜಿ ಚಾಲನೆಯೆ ಅಪಘಾತಕ್ಕೆ ಕಾರಣವಾಗಿದೆ.
ಇದು ಒಂದು ಕಾರಣವಾದರೆ, ಇನ್ನೊಂದೆಡೆ ಶರಾವತಿ ಹೊಳಗೆ ನಿರ್ಮಾಣವಾದ ಹೊಸ ಸೇತುವೆಯಲ್ಲಿ ದ್ವೀಮುಖ ಸಂಚಾರವಿಟ್ಟು ಹಳೇ ಸೇತುವೆಯಲ್ಲಿ ಸಂಚರಿಸದAತೆ ಮಣ್ಣು ಸುರಿದಿರುವ ಅಧಿಕಾರಿಗಳ ನಡೆಗೆ ಆಕ್ರೋಶವು ವುಕ್ತವಾಗುತ್ತದೆ. ಕಳೆದ ಒಂದು ವರ್ಷದಿಂದ ಈ ಹಿಂದೆ ವಾಹನ ಸಂಚರಿಸುತ್ತಿದ್ದ ಸೇತುವೆ ವಾಕಿಂಗ್ ಹಾಗೂ ಮಧ್ಯ ಸೇವನೆಯ ತಾಣವಾಗಿದ್ದು ಬಿಟ್ಟರೆ, ವಾಹನ ಸಂಚಾರಕ್ಕೆ ಅವಕಾಶವಿಲ್ಲ. ದ್ವಿಚಕ್ರ ವಾಹನ ಸುಗಮವಾಗಿ ಈ ಸೇತುವೆ ಮೇಲೆ ಸಂಚರಿಸಲು ಅವಕಾಶ ನೀಡಿದ್ದೇ ಆದರೆ ಇಂತಹ ಅಪಘಾತ ಕಡಿಮೆ ಆಗುತ್ತಿತ್ತು ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ಅಷ್ಟಕ್ಕೂ ಜಿಲ್ಲೆಯಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿ ಬಗ್ಗೆ ಸ್ಥಳೀಯ ಯಾವೋಬ್ಬ ಶಾಸಕರು, ಸಂಸದರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಅವೈಜ್ಞಾನಿಕ ಕಾಮಗಾರಿಯಿಂದ ಪ್ರತಿನಿತ್ಯೆ ಅಪಘಾತ ಸಂಭವಿಸುತ್ತಿದೆ. ಈ ಬಗ್ಗೆ ಸೂಕ್ತ ಸ್ಥಳದಲ್ಲಿ ಸುಗಮ ಸಂಚಾರ ಹಾಗೂ ಬೀದಿ ದೀಪ ಸೇರಿದಂತೆ ವಿವಿಧ ವ್ಯವಸ್ಥೆ ಬಗ್ಗೆ ಸಾರ್ವಜನಿಕರೂ ಆಗ್ರಹಿಸಿದರೂ ಶಾಸಕರು ಚಕಾರ ಎತ್ತುತ್ತಿಲ್ಲ. ಎಡರು ಸೇತುವೆ ಇದ್ದರೂ ಹಳೆ ಸೇತುವೆ ಮೇಲೆ ವಾಹನ ಸಂಚಾರ ಹಾಗೂ ಪಟ್ಟಣದ ಚತುಷ್ಟಥ ಕಾಮಗಾರಿಕೆ ಬಗ್ಗೆ ಹಾಲಿ ಶಾಸಕರು ಮಾಜಿ ಶಾಸಕರ ಮೇಲೆ ಆರೋಸ ಪ್ರತ್ಯಾರೋಪ ಮಾಡಿ ರಾಜ ಕಾರಣ ಮಾಡುವುದರ ಹೊರತಾಗಿ ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗುತ್ತಿಲ್ಲ. ಇವರ ಕೆಟ್ಟ ರಾಜಕಾರಣಕ್ಕೆ ಹೆದ್ದಾರಿಯಲ್ಲಿ ಜೀವ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ಅಪಘಾತ ಸಂಭವಿಸಿದಾಗ ಜಿಲ್ಲೆಯಲ್ಲಿ ಮೆಲ್ಟಿಸ್ಪ್ಪೆಷಾಲಿಟಿ ಆಸ್ಪತ್ರೆ ಹಾಗೂ ಟ್ರಾಮಾ ಸೆಂಟರ್ ಅವಶ್ಯಕತೆ ಎದ್ದು ಕಾಣುತ್ತದೆ. ಪ್ರತಿ ಬಾರಿಯೂ ಅಧಿಕಾರದಲ್ಲಿದ್ದಾಗ ಆಶ್ವಾಸನೆ ನೀಡಿ ಚುನಾವಣೆ ಎದುರಿಸುವಲ್ಲಿಯೇ ಜನಪ್ರತಿನಿಧಿಗಳು ತಲ್ಲೀನರಾಗುತ್ತಿದ್ದಾರೆ. ಜಿಲ್ಲೆಯ ತುರ್ತು ಅಗತ್ಯೆತೆಯ ಬಗ್ಗೆ ಜನಪ್ರತಿನಿಧಿಗಳು ಇನ್ನಾದರೂ ಗಮನಿಸಿ ಜಿಲ್ಲೆಯ ಈ ಸೌಲಭ್ಯ ಒದಗಿಸುವ ಜೊತೆ ಐಆರ್‌ಬಿ ಅವೈಜ್ಞಾನಿಕ ಕಾಮಗಾರಿ ಸರಿಪಡಿಸುವತ್ತ ಗಮನಹರಿಸಬೇಕಿದೆ.
ಯುವಕನ ಮೃತದೇಹ ಪತ್ತೆ !
ಪಟ್ಟಣದ ಶರಾವತಿ ಸೇತುವೆಯ ಮೇಲೆ ಸೋಮವಾರ ಸಂಜೆ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಈರ್ವರು ಯುವಕರು ಸೇತುವೆಯಿಂದ ಶರಾವತಿ ನದಿಯಲ್ಲಿ ಬಿದ್ದಿದ್ದರು,
ಈ ಪೈಕಿ ಓರ್ವನನ್ನು ಮೀನುಗಾರರು ರಕ್ಷಿಸಿದ್ದು, ನಾಪತ್ತೆಯಾಗಿದ್ದ ಯುವಕ ಅಕ್ಷಯ ತಾಂಡೇಲ್ ಮೃತದೇಹ ಮಂಗಳವಾರ ಪತ್ತೆಯಾಗಿದೆ.
ಪೊಲೀಸರು ಕರಾವಳಿ ಕಾವಲುಪಡೆ ಸಿಬ್ಬಂದಿ, ಅಗ್ನಿಶಾಮಕದಳ, ಸ್ಥಳೀಯ ಮೀನಿಗಾರರು ಮಂಗಳವಾರ ಬೆಳಗ್ಗೆಯಿಂದ ಶೋಧ ಕಾರ್ಯದಲ್ಲಿ ತೊಡಗಿದ್ದರು. ಮಧ್ಯಾಹ್ನ ಮೃತದೇಹ ಸೇತುವೆಯ ಸಮೀಪ ಮೃತದೇಹ ಪತ್ತೆಯಾಗಿದೆ.
ಕಾಲೇಜು ವ್ಯಾಸಂಗದ ಬಳಿಕ ಆಟೋ ವೃತ್ತಿ ನಿರ್ವಹಿಸಿ ಕುಟುಂಬದ ಆಸರೆಯಾಗಿದ್ದ ಅಕ್ಷಯ, ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದ. ಜೊತೆಗೆ ಈತನ ತಂದೆ ಕೂಡ ಅನಾರೋಗ್ಯಕ್ಕೊಳಗಾಗಿದ್ದಾರೆ. ಇವರ ವೈದ್ಯಕೀಯ ವೆಚ್ಚದ ಜೊತೆ ಸಹೋದರಿಯ ಮದುವೆ ಸೇರಿದಂತೆ ಹಲವು ಕನಸು ಕಂಡಿದ್ದ ಯುವಕನು ಅನಿರೀಕ್ಷಿತ ಅಪಘಾತದಲ್ಲಿ ಮರಣ ಹೊಂದಿರುವುದು ದುಃಖ ಇಮ್ಮಡಿಗೊಳಿಸಿದೆ.
Leave a Comment