ದಾಂಡೇಲಿ: ಮದುವೆ ಎನ್ನುವುದು ಗಂಡು ಮತ್ತು ಹೆಣ್ಣಿನ ನಡುವೆ ಜೀವನದಲ್ಲಿ ನಡೆಯುವ ಮಹತ್ವದ ಅಮೃತ ಘಳಿಗೆ, ಅದು ವ್ಯಾಪಾರವಲ್ಲ. ಮುಂದೆ ಬಹುಕಾಲ ಸತಿ ಪತಿಗಳಾಗಿ ಒಂದಾಗಿ ಕೂಡಿ ಬಾಳಿ ಸಂಸಾರದ ಬಂದಿದ್ದ. ರಥವನ್ನು ಮುನ್ನಡೆಸಿಕೊಂಡು ಹೋಗಬೇಕು.
ಹಿನ್ನಲೆಯಲ್ಲಿ ಹುಡುಗ-ಹುಡುಗಿ ಹಾಗೂ ಹೆತ್ತವರು ಪರಸ್ಪರ ಮಾತುಕತೆ ನಡೆಸಿ, ಹುಡುಗ, ಹುಡುಗಿಯ ಮನೆಯ ಎಲ್ಲ ವಿಚಾರಗಳನ್ನು ತಿಳಿದ ನಂತರವೆ ಮದುವೆಯ ಮುಂದಿನ ಶಾಸ್ತ್ರ ಕಾರಗಳು ನಡೆಯುವುದು ವಾಡಿಕೆ.
ಯಾವತ್ತು ಮದುವೆ ಎನ್ನುವುದು ಒಂದೆರಡು ದಿನದ ಆಟವಲ್ಲ.ಹುಡುಗಿ ನೋಡಿ ಒಂದೆರಡು
ದಿನಗಳಲ್ಲಿ ಮದುವೆಯಾದರೆ ಏನಾಗಬಹುದು ಎನ್ನುವುದಕ್ಕೆ ಬುಧವಾರ ಇಲ್ಲಿ ನಡೆದ ಮದುವೆಯೊಂದು ಉದಾಹರಣೆಯಾಗಿದೆ.
ಹುಡುಗ ಮದುವೆ ದಲ್ಲಾಳಿಯೊಬ್ಬನ ಮೂಲಕ ಹುಡುಗಿಯನ್ನು ನೋಡಿ ಬಂದಿದ್ದ. ಹುಡುಗಿಯನ್ನು ನೋಡಲು ಹೋದಾಗಲೆ ಹುಡುಗನಿಗ ಹುಡುಗಿಗೆ ಪೊಲಿಯೋ ಇರುವುದನ್ನು ಹೇಳಿದ್ದಾರೆ.
ಆದರೂ ಹುಡುಗ ಒಪ್ಪಿ ಮಾನವೀಯತೆ ಮೆರೆದಿದ್ದಾನೆ. ವಧು ನೋಡಿ ಮೂರೇ ದಿನಕ್ಕೆ ಬುಧವಾರ ಮದುವೆ ಶಾಸ್ತ್ರ ಕೂಡ ಮುಗಿಸಲಾಗಿದೆ. ಮದುಮಗ ಮತ್ತು ಮಧುಮಗಳ ಕಡೆಯ ಹಿರಿಯರ ಸಮಕ್ಷಮದಲ್ಲಿ ತಾಳಿ ಕಟ್ಟಿದ ಮೇಲೆ ಊಟಕ್ಕೂ ನವದಂಪತಿ ತೆರಳಿದ್ದರು.
ಊಟದ ಸಮಯದಲ್ಲಿ ಮದುಮಗಳು ಎಡಗೈಯಲ್ಲಿ ಊಟ ಮಾಡಲು ಪ್ರಾರಂಭಿಸಿದ್ದನ್ನು ಗಮನಿಸಿದ ಮದುಮಗ.ಊಟ ಆದ ತಕ್ಷಣವೇ ಮದುಮಗಳನ್ನು ಬಿಟ್ಟು ವಾಹನವನ್ನೇರಿ
ಹೋಗಲು ಯತ್ನಿಸಿದ್ದಾನೆ. ಆಗ ಸ್ಥಳೀಯರು ಮದುಮಗನನ್ನು ತಡೆದು ನಿಲ್ಲಿಸಿದ್ದು, ಇದೇ ಸಂದರ್ಭದಲ್ಲಿ 112 ಪೊಲೀಸರು ಮತ್ತು ಮಹಿಳಾ ಕೇಂದ್ರದವರು ಭೇಟಿ ನೀಡಿ ಮದುಮಗ ಮತ್ತು ಮದುಮಗಳ ಜೊತೆ ಮಾತುಕತೆ ನಡೆಸಿದ್ದಾರೆ.
ಕೊನೆಗೆ ಮದುಮಗ ಮತ್ತು ಮದುಮಗಳನ್ನು ಮಹಿಳಾ ಕೇಂದ್ರದ ಕಚೇರಿಗೆ ಕರೆದುಕೊಂಡು ಹೋಗಿ, ಸುಖ ಸಂಸಾರ ನಡೆಸಲು ಅಗತ್ಯ ಕೌಟುಂಬಿಕಾ ಸಲಹೆಯನ್ನು ನೀಡಿ ಮದುಮಗ ಮತ್ತು ಮದುಮಗಳಿಂದ ಮುಚ್ಚಳಿಕೆ ಪತ್ರ ಬರೆದು ಗಂಡ ಹೆಂಡತಿಯನ್ನು ಒಂದು ಮಾಡಿಸಿ ಕಳುಹಿಸಿಕೊಡುವ ಜವಬ್ದಾರಿಯನ್ನು ಹೊತ್ತು ಕರೆದುಕೊಂಡು ಹೋಗಿದ್ದಾರೆ.
- ಸೀಗಡಿ ಕೃಷಿ ಸ್ಥಗಿತ ಗೊಳಿಸಲು ಮೀನುಗಾರರ ಆಗ್ರಹ
- ಬೋನಿಗೆ ಬಿದ್ದ ಚಿರತೆ
- ದಾಲ್ಚಿನ್ನಿ ಕೃಷಿ ಅನುಭವ
- ಜ19 ರ ಬೆಳಿಗ್ಗೆ 6 ಗಂಟೆಯಿಂದ ಜ. 20 ರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧ
- ಡಾ.ಬಿ. ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಗೆ ಅರ್ಜಿ ಆಹ್ವಾನ 2025-26
,
Leave a Comment