ಶಿರಸಿ: ಉಕೇನ್ ದೇಶದ ಕಲಾವಿದರಿಂದ ಮರಳು ಕಲೆಗೆ ಸ್ಫೂರ್ತಿ ಪಡೆದು ಹಿಡಿತ ಸಾಧಿಸಿದ ಕನ್ನಡದ ಕಲಾವಿದನಿಗೆ ರಷ್ಯಾ ಸಂಸ್ಥೆಯೊಂದು ಬಹುಮಾನ ಘೋಷಿಸಿದೆ.

ರಷ್ಯಾ ದೇಶದ ಮಾಸ್ಕೋ ನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಕಲಾತ್ಮಕ ಭಾವಚಿತ್ರ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಡ್ನಮನೆ ಮೂಲದ ರಾಘವೇಂದ್ರ ಹೆಗಡೆ ಅವರ ಮರಳು ಕಲಾಕೃತಿಗೆ ತೃತೀಯ ಬಹುಮಾನ ಲಭಿಸಿದೆ.

ರಾಘವೇಂದ್ರ ಹೆಗಡೆ ಮರಳು ಕಲಾ ಮಾಧ್ಯಮದ ಕಲಾಕೃತಿ ರಚನೆಯಲ್ಲಿ ನಿರತರಾಗಿದ್ದು, ಅನೇಕ ಅಂತರಾಷ್ಟ್ರೀಯ ಮಟ್ಟದ ಸಮಾರಂಭದಲ್ಲೂ ಕಲಾ ಪ್ರದರ್ಶನ ನೀಡಿದ್ದಾರೆ. ಇತ್ತೀಚೆಗೆ ಮರಳು ಕಲಾ ಪ್ರದರ್ಶನ ಕೂಡ ಬೆಂಗಳೂರಿನಲ್ಲಿ ಏರ್ಪಡಿಸಿದ್ದು, ಇಡೀ ನಾಡಿನ ಗಮನ ಸೆಳೆದಿತ್ತು ಎಂಬುದೂ ಉಲ್ಲೇಖನೀಯ.
Leave a Comment