ಭಟ್ಕಳ:ತಾಲೂಕಿನ ಪುಷ್ಪಾಂಜಲಿ ಚಲನಚಿತ್ರ ಮಂದಿರಲ್ಲಿ ದಿ ಕಶ್ಮೀರ ಪೈಲ್ಸ್ ಚಲನ ಚಿತ್ರ ಶಾಸಕ ಸುನೀಲ ನಾಯ್ಕ
ಮುಂದಾಳತ್ವದಲ್ಲಿ ಉಚಿತ ಪ್ರದರ್ಶನ ನಡೆಯುತ್ತಿದ್ದು
ಇದರ ಉದ್ಘಾಟನೆಯನ್ನು ಭಟ್ಕಳ ಬಿಜೆಪಿ ಮಂಡಲದ ಅಧ್ಯಕ್ಷ ಸುಬ್ರಾಯ ದೇವಡಿಗ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ದೇಶಾದ್ಯಂತ ಕಾಶ್ಮೀರಿ ಫೈಲ್ ಚಿತ್ರ ಬಿಡುಗಡೆಯಾಗಿದ್ದು ಅಂದಿನಿಂದ ಇಂದಿನವರೆಗೆ ಈ ಚಿತ್ರದ ವೈಶಿಷ್ಟ್ಯತೆ ಏನೆಂದರೆ ಚಿತ್ರದ ಪ್ರಚಾರವನ್ನು ಜನರೇ ಮಾಡಿ ಜನರೇ ಚಿತ್ರವನ್ನು ವೀಕ್ಷಿಸುತ್ತಿದ್ದಾರೆ ಎಂದ ಅವರು ಕಾಶ್ಮೀರಿ ಫೈಲ್ಸ್ ಚಿತ್ರ ಬಿಡುಗಡೆಯಾಗಿರುವುದರಿಂದ ಕೆಲವರಿಗೆ ಬೇರೆ ತರಹದ ಫೈಲ್ಸ್ ಶುರುವಾಗಿದೆ ಹಾಗೂ ಇದು ಸಾವಿರಾರು ವರ್ಷದ ಹಿಂದೆ ನಡೆದ ಘಟನೆ ಅಲ್ಲದೆ ಕೇವಲ 32 ವರ್ಷದ ಹಿಂದೆ ನಮ್ಮ ಜನಾಂಗದ ಮೇಲೆ ಅತಿ ಭೀಕರವಾಗಿ ನಡೆದಂಥ ಹಲ್ಲೆಯಾಗಿದ್ದು ,ಅದರ 1ಅಂಶವನ್ನು ಮಾತ್ರ ಚಿತ್ರದಲ್ಲಿ ತೋರಿಸಲಾಗಿದ್ದು 1989 ರಿಂದ 1990 ತನಕ 1ವರ್ಷಗಳ ಕಾಲ ಕಾಶ್ಮೀರಿ ಹಿಂದೂಗಳ ಮೇಲೆ ನಡೆದ ಅತ್ಯಾಚಾರವನ್ನು 3ಗಂಟೆಗಳ ಕಾಲ ತೋರಿಸಲು ಸಾಧ್ಯವಿಲ್ಲ .ಅಲ್ಲಿ ನಡೆದ ಘಟನೆಯ 1ಅಂಶವನ್ನು ಮಾತ್ರ ಈ ಚಿತ್ರದಲ್ಲಿ ತೋರಿಸಲಾಗಿದೆ ಹಾಗೂ ಈ ಚಿತ್ರವನ್ನು ವೀಕ್ಷಿಸಲು ಶಾಸಕರು ವ್ಯವಸ್ಥೆ ಮಾಡಿದ್ದು ಇವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ನಂತರ ಇನ್ನೋರ್ವ ಬಿಜೆಪಿ ಹಿರಿಯ ಮುಖಂಡ ನರೇಂದ್ರ ನಾಯಕ್ ಮಾತನಾಡಿ ಕಳೆದ ಮೂವತ್ತೆರಡು ವರ್ಷಗಳ ಹಿಂದೆ ಹಿಂದೂಗಳ ಮೇಲೆ ನಡೆದ ಘೋರ ಘಟನೆಯನ್ನು ಮರೆಮಾಚಿದ್ದು ಆ ಘಟನೆಯನ್ನು ಜನರ ಮುಂದೆ ಇಡುವ ಪ್ರಯತ್ನ ಈ ಚಿತ್ರದಲ್ಲಿ ನಡೆದಿದ್ದು .ನಾವು ಈ ಚಿತ್ರ ನೋಡಿ ಜಾಗ್ರತರಾಗುವ ಸನ್ನಿವೇಶ ನಮಗೆ ಬಂದಿದೆ ಎಂದವರು ಈ ಚಿತ್ರದ ನಿರ್ದೇಶಕರಾದ ವಿವೇಕ್ ಅಗ್ನಿಹೋತ್ರಿ ಚಿತ್ರ ವೀಕ್ಷಣೆಗೆ ಅನುವು ಮಾಡಿಕೊಟ್ಟು ಶಾಸಕ ಸುನೀಲ ನಾಯ್ಕ ಅವರಿಗೆ ಧನ್ಯವಾದ ಸಲ್ಲಿಸಿದರು.
ಇಂದು ನಡೆಯುವ 4ಚಿತ್ರ ಪ್ರದರ್ಶನವನ್ನು ಉಚಿತವಾಗಿ ಶಾಸಕ ಸುನಿಲ ನಾಯ್ಕ ಭಟ್ಕಳ ಜನತೆಗೆ ನೀಡಿದ್ದಾರೆ
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
Leave a Comment