ಹೊನ್ನಾವರ : ತಾಲೂಕಿನಲ್ಲಿ ನಡೆಯುವ ಹಿಂದು ಉತ್ಸವ ಹಾಗೂ ಜಾತ್ರೆ ಸಂದರ್ಭದಲ್ಲಿ, ಹಿಂದುಯೇತರ ಯಾವುದೇ ಸಮಾಜದವರು ವ್ಯಾಪಾರ ಮಾಡಲು ಅನುಮತಿ ನೀಡಬಾರದು, ಭಾರತೀಯರಾದ ನಾವು ದೇಶ ಮೊದಲು, ಆನಂತರ ಧರ್ಮ ಎನ್ನುವ ಅರಿವು ಇರಬೇಕು. ಎಂದು ಹಿಂದು ಜಾಗರಣಾವೇದಿಕೆ ಪಟ್ಟಣ ಪಂಚಾಯಿತಿಗೆ ಮನವಿ ಮಾಡಿದೆ.

ಇತ್ತೀಚಿಗೆ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನ, ಅನಗತ್ಯ ಗೊಂದಲದಿAದ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿದೆ. ಸಮಾಜದಲ್ಲಿ ಶಾಂತಿ ಕದಲಲು ಹಿಜಾಬ್ ಪ್ರಕರಣ ಉದ್ದೇಶಪೂರ್ವಕವಾಗಿ ಕೋಮು ಪ್ರಚೋದನೆ ಉಂಟುಮಾಡಿದೆ.
ಈ ಬಗ್ಗೆ ರಾಜ್ಯದ ಹೈಕೋರ್ಟ್ ತೀರ್ಪನ್ನು ಧಿಕ್ಕರಿಸಿ ರಾಜ್ಯದಲ್ಲಿ ಬಂದ್ ನಡೆಸುವ ಮೂಲಕ ದೇಶದ ಸಂವಿಧಾನ ಹಾಗೂ ನ್ಯಾಯಾಂಗ ವ್ಯವಸ್ಥೆಗೆ ಮಾಡಿದ ಅಪಮಾನ ಮಾಡಲಾಗಿದೆ. ಇದಕ್ಕಾಗಿ ರಾಮನವಮಿ ಅಂಗವಾಗಿ ಹೊನ್ನಾವರದಲ್ಲಿ ನಡೆಯುವ ಜಾತ್ರೆಯ ಪೂರ್ವದ ಅಂಗಡಿಗಳ ಹರಾಜು ಪ್ರಕ್ರಿಯೆಯಲ್ಲಿ ಹಿಂದುಗಳಿಗೆ ಮಾತ್ರ ಅವಕಾಶ ನೀಡಬೇಕು’ ಎಂದು ಹಿಂದು ಜಾಗರಣಾ ವೇದಿಕೆ ಮನವಿ ಸಲ್ಲಿಸಿದ್ದು, ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಿವರಾಜ ಮೇಸ್ತ ಮನವಿ ಸ್ವೀಕರಿಸಿದರು.
ಹಿಂದು ಜಾಗರಣಾ ವೇದಿಕೆಯ ಕಾರ್ಯಕರ್ತ ಸಂಜು ಶೇಡ್ ಮಾತನಾಡಿ, ಹೈಕೊರ್ಟ್ ಆದೇಶ ಧಿಕ್ಕರಿಸಿ ಸಂವಿಧಾನ ಹಾಗೂ ನ್ಯಾಯಾಂಗ ವ್ಯವಸ್ಥೆಗೆ ಅಪಮಾನ ಮಾಡಿದ್ದಾರೆ. ನಮ್ಮ ಸಮಾಜದ ಜಾತ್ರೆ ವ್ಯಾಪಾರ – ವಹಿವಾಟಿಗೆ ಅವಕಾಶ ನೀಡಬೇಕು. ಈ ಬಗ್ಗೆ 2002 ರ ಹಿಂದು ಧಾರ್ಮಿಕ ದತ್ತಿ ಕಾಯ್ದೆಯಲ್ಲಿ ಹಿಂದೂ ದೇವಾಲಯದ ಜಾತ್ರೆ ಹಾಗೂ ಉತ್ಸವದಲ್ಲಿ ಅನ್ಯಧರ್ಮದವರು ವ್ಯಾಪಾರ ನಡೆಸುವುದು ತಪ್ಪು ಎಂದು ಸರ್ಕಾರದ ಆದೇಶವಿದೆ.
ಇಂದು ಪಟ್ಟಣದ ಜಾತ್ರೆ ಹಾಗೂ ಮುಂದಿನ ದಿನಗಳಲ್ಲಿ ತಾಲ್ಲೂಕಿನನಲ್ಲಿ ನಡೆಯುವ ಉತ್ಸವದಲ್ಲಿ ಅನ್ಯಧರ್ಮಿಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಸರ್ಕಾರಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.
ಮನವಿ ಸ್ವೀಕರಿಸಿದ ಪ.ಪಂ ಅಧ್ಯಕ್ಷ ಶಿವರಾಜ ಮೇಸ್ತ ಮಾತನಾಡಿ, ಏ. 10 ರಂದು ನಡೆಯುವ ಜಾತ್ರೆಗೆ ಏ. 4 ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹಿನ್ನಲೆ ಏ. 1 ರಂದು ಸದಸ್ಯರು ವಿಶೇಷ ಸಭೆ ಕರೆದು ಚರ್ಚಿಸಿ ತೀಮಾನ ಕೈಗೊಳ್ಳಲಾಗುವುದು. ನಿಮ್ಮ ಮನವಿಯ ವಿಷಯವನ್ನು ಸಭೆಯ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ತಾಲ್ಲೂಕು ಸಂಚಾಲಕ ವಿರೇಂದ್ರ ಮೇಸ್ತ, ಪ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಭಟ್, ಬಿಜೆಪಿ ಮಂಡಲಾಧ್ಯಕ್ಷ ರಾಜು ಭಂಡಾರಿ, ಸದಸ್ಯರಾದ ವಿಜಯ ಕಾಮತ್, ಸುಬಾಷ ಹರಿಜನ, ಜಾಗರಣಾ ವೇದಿಕೆಯ ಕಾರ್ಯಕರ್ತರಾದ ಮುರಳೀಧರ ಗಾಯತೊಂಡೆ, ರಾಘು ಶೇಟ್, ಗಣಪತಿ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.
Leave a Comment