
ಯಲ್ಲಾಪುರ: .ಹಿಂದೂ ಧರ್ಮ ಮೂಲ ವಿಜ್ಞಾನವಿದ್ದಂತೆ..ಸAಶೋಧಿಸಿದಷ್ಟು ಅಗಾಧ ಪಾಂಡಿತ್ಯ ತೆರೆದುಕೊಳ್ಳುತ್ತದೆ. ಆಕ್ರಮಣಕಾರರು ಹಿಂದೂ ಧರ್ಮದ ಮೂಲ ಸಿಗಲಾರದೇ ಹತಾಶರಾಗಿದ್ದಾರೆ.
.ಭಾರತದ ಮೂಲಕೇಂದ್ರದ ಅಂತರAಗವನ್ನು ಉಳಿಸಿಕೊಳ್ಳಲು ನಾವು ಶ್ರಮಿಸಬೇಕು ಎಂದು ಪ್ರಖ್ಯಾತ ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು
ಅವರು ಸೋಮವಾರ ಸಂಜೆ ತಾಲ್ಲೂಕಿನ ವಜ್ರಳ್ಳಿಯ ಹೊನ್ನಗದ್ದೆ ಯ ವೀರಭದ್ರ ದೇವರ ಪ್ರತಿಷ್ಠಾಪನೆಯ ನಿಮಿತ್ತ ಹಮ್ಮಿಕೊಂಡ ಉಪನ್ಯಾಸ ಮಾಲಿಕೆಯ ರಾಷ್ಟ್ರಚಿಂತನದ ವಿಷಯದ ಕುರಿತು ಮಾತನಾಡಿ ಭಾರತ ಭಾವ ತುಂಬ ಭಕ್ತಿ ಯ ಶಕ್ತಿ ಇದೆ .ಚೈತನ್ಯ ಪೂರ್ಣ ದೇವರನ್ನು ಆರಾದಿಸುವುದರಿಂದ ನಾಡಿನ ಕೇಂದ್ರ ನಾಡಿಯ ಆಧ್ಯಾತ್ಮವನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲಾ. ಇಷ್ಟು ಆಕ್ರಮಣದ ಹಿಂದೆ ಹಿಂದುವಿನ ಮಾತನಾಡುವ ಶಕ್ತಿ ಈ ನೆಲದಲ್ಲಿದೆ.
ಭಗವಂತನ ನಂಬಿಕೆ ನಮ್ಮನ್ನು ಬದುಕಿಸಿದೆ. .ಕಾಶ್ಮೀರ ಸಮಸ್ಯೆಯ ಹಿಂದೆ ಜ್ಞಾನ ಕೇಂದ್ರವನ್ನು ಕೊನೆಗಾಣಿಸುವ ಹುನ್ನಾರ ಆಕ್ರಮಣಕಾರಿಗಳಿಗಿತ್ತು
ಕಾಶ್ಮೀರದ೩೭೦ ಕಾಯ್ದೆ ಕಿತ್ತು ಬಿಸಾಕಿರುವುದರಿಂದ ನಾವು ಈ ನೆಲದಲ್ಲಿ ಧ್ವನಿ ಎತ್ತಿ ಮಾತನಾಡುವ ತಾಕತ್ತು ಇದೆ.
ಕುದರತ್ ಬಿರಿಯಾನಿಯನ್ನುಹಂಚುವ ದಂಗೆಯ ಹಿಂದೆ ಪ್ರತಿಭಟನೆಯ ಉದ್ದೇಶದ ಬದಲಿಗೆ ನಮ್ಮತನ ಕುಗ್ಗಿಸುವ ಹುನ್ನಾರ ಇತ್ತು.
ನನಗುಟ್ಟುವ ಸಂತಾನ ರಾಷ್ಟ್ರಕಟ್ಟುವ ಜೀವವಾಗಲಿ ಎನ್ನುವ ತಾಯಂದಿರ ಸಂಖ್ಯೆ ಹೆಚ್ಚಾಗುತ್ತಿದೆ.
ಇಂದು ಭಾರತ ಸಾವಲಂಬಿಯಾಗಿರುವುದಕ್ಕೆ ಕಾರಣ ಮನುಷ್ಯತ್ವದ ಉದಾರತೆಯ ಶ್ರೀಮಂತಿಕೆ. ಕೊವಿಡ್ ಲಸಿಕೆಯಲ್ಲಿ ಭಾರತ ಸಾಧಿಸಲು ಕಾರಣ ಪ್ರಧಾನಿ ಮೋದಿಯವರ ಮುಂದಾಳತ್ವದ ಯೋಚನೆಯ ಜೀವಪರ ಕಾಳಜಿ. ಸಾಧಿಸುವ ಗುಣ ಈ ಭಾರತದ ನೆಲದ ಪರಂಪರೆಯ ಕೊಡುಗೆ. ಭಾರತ ಇಡೀ ಜಗತ್ತನ್ನು ಆಕರ್ಷಿಸುವಷ್ಟು ಬೆಳೆದಿದೆ.
ನಾವು ಜಗತ್ತಿನ ಪ್ರಮುಖ ಸ್ಥಾನದಲ್ಲಿ ಗುರುತಿಸಿಕೊಂಡಿದ್ದೇವೆ. ರಾಷ್ಟ ಕಟ್ಟುವ ಕೆಲಸ ಮಾಡೋಣ. ಎಂದರು.ವೇದಿಕೆಯಲ್ಲಿ ಎಸ್.ಎನ್ ಗಾಂವ್ಕಾರ, ಈಶ್ವರದಾಸ ಕೊಪ್ಪೆಸರ, ಶ್ರೀರಂಗ ಕಟ್ಟಿ ಮತ್ತಿತರರು ಇದ್ದರು.
ಆಡಳಿತ ಸಮಿತಿಯ ಅಧ್ಯಕ್ಷ ಡಿ ಜಿ. ಭಟ್ಟ ಸ್ವಾಗತಿಸಿ ನಿರ್ವಹಿಸಿದರು.
Leave a Comment