ಕAಠ್ಮAಡು : ನೇಪಾಳವನ್ನು ಹಿಂದೂ ದೇಶವೆಂದು ಘೋಷಿಸಬೇಕೆಂಬ ಬೇಡಿಕೆಗೆ ಆ ದೇಶದ ಹಿರಿಯ ಸಚಿವರೇ ಬೆಂಬಲ ನೀಡಿದ್ದಾರೆ. ದೇಶದ ಬಹುಸಂಖ್ಯಾತ ಜನರು ಈ ಬೇಡಿಕೆಯತ್ತ ಒಲವು ತೋರಿದ್ದಲ್ಲಿ ಜನಮತಗಣನೆ ಮೂಲಕ ಆ ರೀತಿ ಘೋಷಿಸಲು ಸಾಧ್ಯವಿದೆ ಎಂದೂ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಪ್ರೇಮ್ ಅಲ್ವೇ ಅಭಿಪ್ರಾಯಪಟ್ಟಿದ್ದಾರೆ.
ಈ ಬೇಡಿಕೆಗೆ ಪರಿಗಣನೆಗೆ ಬಂದಲ್ಲಿ ತಾವೇ ಖುದ್ದಾಗಿ ಇದರಲ್ಲಿ ಸಕ್ರಿಯ ಪಾತ್ರ ವಹಿಸುವುದಾಗಿಯೂ ಅವರು ವಿಶ್ವ ಹಿಂದೂ ಒಕ್ಕೂಟದ ಎರಡು ದಿನಗಳ ಕಾರ್ಯಕಾರಿ ಸಭೆಯ ಆರಂಭಿಕ ಅಧಿವೇಶನದಲ್ಲಿ ವಿವರಿಸಿದರು. ಭಾರತ, ನೇಪಾಳ, ಶ್ರೀಲಂಕಾ,ಸೇರಿದAತೆ 12 ದೇಶಗಳ 150ಕ್ಕೂ ಹೆಚ್ಚು ಪ್ರತಿನಿಧಿಗಳು ಅಧಿವೇಶನದಲ್ಲಿ ಪಾಲ್ಗೊಂಡಿದ್ದಾರೆ.
ಸದ್ಯ ಐದು ಪಕ್ಷಗಳ ಮಿತ್ರಕೂಟವು ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತ ಹೊಂದಿದೆ. ಹೀಗಾಗಿ ನೇಪಾಳ ಹಿಂದೂ ದೇಶವೆಂಬ ಘೋಷಣೆಯನ್ನು ಜನಮತಗಣನೆ ಮೂಲಕ ಅಂಗೀಕರಿಸಲು ಅವಕಾಶವಿದೆ ಎಂದವರು ಹೇಳಿಕೊಂಡರು.
- ಬ್ಯಾಂಕ್ ಆಫ್ ಬರೋಡಾ ನೇಮಕಾತಿ|BOB new Recruitment 26-9-2023
- IDBI Bank Recruitment Apply Online for JAM Post 2023 idbi ಬ್ಯಾಂಕ್ ನೇಮಕಾತಿ
- ಸಿಬ್ಬಂದಿ ಮತ್ತು ಆಡಳಿತ ಇಲಾಖೆ ನೇಮಕಾತಿ 2023 Sakala Recruitment 2023 bangalore job
- DCCB Recruitment 16-10 2023 ವಿವಿಧ ಹುದ್ದೆಗಳ ನೇಮಕಾತಿ
- 450 ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ RBI Recruitment 4-10- 2023
Leave a Comment