ಹುಬ್ಬಳ್ಳಿ: ಹಿಂದೂ ಯುವತಿಯೊಬ್ಬಳನ್ನು ಲವ್ ಜಿಹಾದ್ ಮೂಲಕ ಕರೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ಎಸ್‌ಎಸ್‌ಕೆ ಸಮಾಜ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಉಪನಗರ ಠಾಣೆ ಎದುರು ಬುಧವಾರ ಇಡೀ ದಿನ ಧರಣಿ ನಡೆಸಿದರು.
ಉಪನಗರ ಪೊಲೀಸ್ ಠಾಣೆ ಎದುರು ಸೇರಿದ ನೂರಾರು ಯುವಕರು ಮಧ್ಯಾಹ್ನದಿಂದ ರಾತ್ರಿವರೆಗೆ ಭಜನೆ ಮಾಡಿ ಪ್ರತಿಭಟನೆ ನಡೆಸಿ ಯುವತಿ ರಕ್ಷಣೆಗೆ ಆಗ್ರಹಿಸಿದರು. ಈ ವೇಳೆ ಪೊಲೀಸ್ ಅಧಿಕಾರಿಗಳು ಕಾರ್ಯಕರ್ತರ ಮನವೊಲಿಸಲು ಪ್ರಯತ್ನಿಸಿದರಾದರೂ ಹಿಂದೂಪರ ಸಂಘಟನೆಗಳ ಮುಖಂಡರು ಯುವತಿಯನ್ನು ಕರೆಸುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದು ಕಾರಣವಾಯಿತು. ಕೊನೆಗೆ ಡಿಸಿಪಿ ಸಾಹೀಲ್ ಬಾಗ್ಲಾ ಅವರು ಶೀಘ್ರದಲ್ಲಿ ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು. ಆದ್ದರಿಂದ ಪ್ರತಿಭಟನೆ ಕೈ ಬಿಟ್ಟು ಸಹಕರಿಸುವಂತೆ ಮನವೊಲಿಸಿದರು.
ಉಣಕಲ್ ನಿವಾಸಿ ಸ್ನೇಹಾ ರಾಜು ಡಮಾಮಘರ್ ಎಂಬ ಯುವತಿಯನ್ನು ಅನ್ಯ ಕೋಮಿನ ಯುವಕ ಇಬ್ರಾಹಿಂ ಸೈಯದ್ ಫೆಬ್ರುವರಿ 11 ರಂದು ಗದಗಿನಲ್ಲಿ ರಿಜಿಸ್ಟರ್ ಮೂಲಕ ಮದುವೆ ಆಗಿದ್ದಾನೆ. ಈಕೆ ಕಾಣೆಯಾಗಿದ್ದಾಳೆ ಎಂದು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಯುವತಿ ತಾಯಿ ಯಲ್ಲಮ್ಮಾ ದೂರು ದಾಖಲಿಸಿದ್ದಾರೆ.
- ಬ್ಯಾಂಕ್ ಆಫ್ ಬರೋಡಾ ನೇಮಕಾತಿ|BOB new Recruitment 26-9-2023
- IDBI Bank Recruitment Apply Online for JAM Post 2023 idbi ಬ್ಯಾಂಕ್ ನೇಮಕಾತಿ
- ಸಿಬ್ಬಂದಿ ಮತ್ತು ಆಡಳಿತ ಇಲಾಖೆ ನೇಮಕಾತಿ 2023 Sakala Recruitment 2023 bangalore job
- DCCB Recruitment 16-10 2023 ವಿವಿಧ ಹುದ್ದೆಗಳ ನೇಮಕಾತಿ
- 450 ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ RBI Recruitment 4-10- 2023
Leave a Comment