
..9
ಯಲ್ಲಾಪುರ:ಮಕ್ಕಳ ಮಾನಸಿಕ ಬೆಳವಣಿಗೆ ಕಲಿಕೆಗೆಬೇಕಾದ ವಾತಾವರಣ ಇರಬೇಕು. ಅಗತ್ಯವಾದ ಪರಿಕರಗಳನ್ನು ಬಳಸಿಕೊಂಡು ಉತ್ತಮ ಫಲಿತಾಂಶದ ಗುರಿತಲುಪಬೇಕು. ಉತ್ತಮ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಲ್ಲರು.ಇಂದಿನ ಆಧುನಿಕತೆಯ ಸ್ಪರ್ಧಾ ಯುಗದಲ್ಲಿ ಕಲಿಕೆಗೆ ಮಹತ್ವ ಇದೆ. ಎಂದು ಶಿಕ್ಷಕ
ಅಜೇಯ ನಾಯಕ ಅಭಿಪ್ರಾಯಪಟ್ಟರು .
ಅವರು ತಾಲ್ಲೂಕಿನ ಹೊನ್ನಗದ್ದೆ ಸರ್ಕಾರಿಹಿರಿಯ ಪ್ರಾರ್ಥಮಿಕಶಾಲೆಯ ಸಮುದಾಯದತ್ತ ಶಾಲೆ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಆದರ್ಶ ಸೇವಾ ಸಹಕಾರಿ ಸಂಘದ ನಿರ್ದೇಶಕ ವಿಘ್ನೇಶ್ವರ ಹೆಗಡೆ, ದತ್ತಾತ್ರೇಯ ಭಟ್ಟ, ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಿಕ್ಷಕರಾಗಿದ್ದ ದಿ.ರಾಜು ಹೆಬ್ಬಾರರವರ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಪ್ರೊತ್ಸಾಹ ಧನ ವಿತರಿಸಲಾಯಿತು. ಮುಖ್ಯಾಧ್ಯಾಪಕ ಎಮ್ ವಿ ಭಟ್ಟ ಗಿಡಗಾರಿ ಸ್ವಾಗತಿಸಿದರು. ಶಿಕ್ಷಕ ಭಾಸ್ಕರ ಭಟ್ಟ, ಕಾರ್ಯಕ್ರಮ ನಿರೂಪಿಸಿದರು.
Leave a Comment