ಹೊನ್ನಾವರ : ತಂಬಾಕು ನಿಯಂತ್ರಣ ತನಿಖಾ ದಳ ಹೊನ್ನಾವರದ ವತಿಯಿಂದ ಗ್ರಾಮೀಣ ಭಾಗಗಳಾದ ಚಂದಾವರ, ಅರೇಂಗಡಿ, ಸಂತೆಗುಳಿಯ ವಿವಿಧ ಅಂಗಡಿಗಳ ಮೇಲೆ ದಾಳಿ ಮಾಡಿ ಕೊಟ್ಟಾ – 2003 ಕಾಯ್ದೆ ಅಡಿಯಲ್ಲಿ ತಂಬಾಕು ಉತ್ಪತ್ನಗಳನ್ನು ಮಾರಾಟ ಮಾಡುತ್ತಿದ್ದವರಿಗೆ ದಂಡ ವಿಧಿಸಲಾಗಿದೆ.
ಇನ್ನು ಮುಂದೆ ತಂಬಾಕು ಉತ್ಪತ್ನಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಶಾಲಾ ಆವರಣದಿಂದ ನೂರು ಗಜಗಳ ಅಂತರದೊಳಗೆ ತಂಬಾಕು ಮಾರಾಟ ಕಡ್ಡಾಯ ನಷೇಧಿಸಿದ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸೇವನೆ ನಿಷೇಧ ಮಾಡಿರುವ ಕುರಿತು ಎಲ್ಲ ಅಂಗಡಿಗಳಲ್ಲಿ ನಾಮ ಫಲಕ ಅಳವಡಿಸುವಂತೆ ಸೂಚಿಸಲಾಯಿತು.
ತಂಬಾಕು ಉತ್ಪತ್ನಗಳ ಮಾರಾಟದ ಬಗ್ಗೆ ಇರುವ ನೀತಿ ನಿಯಮಗಳ ಬಗ್ಗೆ ಅಂಗಡಿಕಾರರಲ್ಲಿ ಜಾಗೃತಿ ಮೂಡಿಸಲಾಯಿತು. ತಂಬಾಕು ನಯಂತ್ರಣ ತನಿಖಾ ದಳದ ಜಿಲ್ಲಾ ನಿಯಂತ್ರಣಾಧಿಕಾರಿ ಪ್ರೇಮನಾಥ ನೇತೃತ್ವದಲ್ಲಿ, ಸದಸ್ಯ ಕಾರ್ಯದರ್ಶಿ, ತಾಲೂಕು ಆರೋಗ್ಯಾಕಾರಿ ಡಾ ಉಷಾ ಹಾಸ್ಯಗಾರ, ಕಡತೋಕಾ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಮಂಜುನಾಥ, ಆರೋಗ್ಯ ಶಿಕ್ಷಣಾಧಿಕಾರಿ ಆಂನದ ಶೇಟ್, ಆರೋಗ್ಯ ನಿರೀಕ್ಷಕ ಚಿದಾನಂದ ಗ್ರಾಮ ಪಂಚಾಯತ ಸಿಬ್ಬಂದಿ ಶಿಶು ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ಜಂಟಿ ಕಾರ್ಯಚಾರಣೆಯಲ್ಲಿ ಪಾಲ್ಗೊಂಡಿದ್ದರು.
- IDBI Bank Recruitment Apply Online for JAM Post 2023 idbi ಬ್ಯಾಂಕ್ ನೇಮಕಾತಿ
- ಸಿಬ್ಬಂದಿ ಮತ್ತು ಆಡಳಿತ ಇಲಾಖೆ ನೇಮಕಾತಿ 2023 Sakala Recruitment 2023 bangalore job
- DCCB Recruitment 16-10 2023 ವಿವಿಧ ಹುದ್ದೆಗಳ ನೇಮಕಾತಿ
- 450 ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ RBI Recruitment 4-10- 2023
- ಈ ಬಾರಿ ಕೆನರಾ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ-ನಿವೇದಿತ್ ಆಳ್ವಾ
Leave a Comment