
ಯಲ್ಲಾಪುರ: ಮೂಲೆಗುಂಪಾದ ಯಾವದೇ ಜಾತಿ ಜನಾಂಗದವರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ನಮ್ಮ ಇಲಾಖೆಯಿಂದ ಮಾಡಲಾಗುತ್ತಿದೆ. . ಈ ದಿಶೆಯಲ್ಲಿ ನಾನು ಬಂದಿರುವದೇ ಕಂದಾಯ ಇಲಾಖೆಗಳ ಕಾನೂನನ್ನು ಬದಲಾವಣೆ ಮಾಡಿ ಸರಳತೆ ಮಾಡಲು, ಜನರ ಬಳಿ ತಲಪುವಂತೆ ಕಟ್ಟಕಡೆಯ ಹಳ್ಳಿಗೂ ಅಧಿಕಾರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದು ಫಲಪ್ರದವಾಗುತ್ತಿದೆ.ಎಂದು ಕಂದಾಯ ಸಚಿವ ಆರ ಅಶೊಕ ಹೇಳಿದರು.

ಕಿರವತ್ತಿ ಗ್ರಾಮ ವ್ಯಾಪ್ತಿಯ ಹೊಸಳ್ಳಿ ಗೌಳಿವಾಡಾಕ್ಕೆ ಭೇಟಿ ನೀಡಿ ಸಭೆಯನ್ನುದ್ದೆಶಿಸಿ ಮಾತನಾಡಿ ರಾಜ್ಯದಲ್ಲಿ ಒಟ್ಟು ೧೦ ಲಕ್ಷ ಹೆಕ್ಟೇರ ಪರೀಭಾರಿತ ಅರಣ್ಯ ಪ್ರದೇಶ (ಡೀಮ್ಡ ಪಾರೇಸ್ಟ ) ಇದೆ . ವರ್ಷಗಳ ಕಾಲ ಹೋರಾಟ ಮಾಡಿ ಈಗ ಅದನ್ನು 6 ಲಕ್ಷ ಎಕರೆ ಪ್ರದೆಶವನ್ನು ನಮ್ಮ ಇಲಾಖೆ ಪಡೆಯಲಿದೆ .ಪೆನ್ನು-ಪಹಣಿ ಕೈಯಲ್ಲಿಟ್ಟುಕೊಂಡು ಸರ್ಕಾರಿ ಜಮಿನೂ ತೆರವು ಸಮಸ್ಯೆಗೆ ಹಿಂದಿದ್ದ ಸರಕಾರ, ಮೊದಲ ಜಿಲ್ಲಾಧಿಕಾರಿಗಳು ಅರಣ್ಯ ಎಂದು ಬರೆದಿರುವದುÀÀ ಕಾರಣವಾಗಿತ್ತು.ಇದೀಗ ಡಿಮ್ಡ ಪಾರೇಸ್ಟ ಜನರ ಕೈಗೆಟುಗುವಂತೆ ಕಾನೂನು ಬದಲಾವಣೆ ಸರ್ಕಾರ ಜಾರಿಗೆ ತರಲಿದೆ.

ಕಂದಾಯ ಇಲಾಖೆಯಲ್ಲಿ ಪಿಂಚಣಿ ಕುರಿತು ಅಧಿಕ ದೂರುಗಳು ಬರುತ್ತಿದ್ದವು ಇದೀಗ ತಾಲೂಕಾಡಳಿದಲ್ಲಿಯೇ ಎಲ್ಲ ದಾಖೆಗಳಿಗೆ ಒಂದು ಬಟನ್ ಒತ್ತಿದರೆ ಸಾಕು ಎಲ್ಲ ಮಾಹಿತಿಗಳು ಲಭ್ಯವಾಗಿ ತ್ವರಿತವಾಗಿಮನೆ ಬಾಗಿಲಿಗೆ ಪಿಂಚಣಿ ಬರುತ್ತದ. ಇದರಿಂದ ಕಳೆದರೆಡು ಅಸೆಂಬ್ಲಿಯಲ್ಲಿ ಈ ಕುರಿತು ಯಾವದೇದೂರುಗಳಿಲ್ಲ. ಎಲ್ಲರಿಂದಲೂ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದರು.ಈ ಸಂದರ್ಭದಲ್ಲಿ, ಸ್ಥಳೀಯ ಮಹಿಳೆಯರು ಪೂರ್ಣಕುಂಭದೊAದಿಗೆ, sಧನಗರ ಗೌಳಿ ಸಮುದಾಯದವರು ತಮ್ಮ ಸಾಂಪ್ರದಾಯಿಕ ಶೈಲಿಯ ನೃತ್ಯದ ಮೂಲಕವಾಗಿ ಸಚಿವಧ್ವಯರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.ನಂತರಗ್ರಾಮದ ಗೌಳಿ ಸಮುಧಾಯದ ವಿಠ್ಠಲನ ಎಡಗೆ ಮನೆಯಲ್ಲಿ ಉಪಹಾರ ಸೇವಿಸಿದ ಅವರು ಇಲ್ಲಿಯ ಆಹಾರವೈವಿದ್ಯತೆ ತುಂಬಾ ರುಚಿಕಟ್ಟಾಗಿತ್ತು. ಗೌಳಿಗರ ಸಂಸ್ಕೃತಿ ,ಆಹಾರ ಪದ್ದತಿ ಜೀವಂತಿಕೆಯಲ್ಲಿಟ್ಟಿದ್ದಾರೆ ಎಂದರು.
ಇಲಾಖೆಯ ಪ್ರತ್ಯಕ್ಷ ಮಾಹಿತಿಗಾಗಿ ಸಚಿವ ಆಶೋಕ್ ಅವರು ಗ್ರಾಮವಾಸ್ತö್ಯಕ್ಕೆ ಬಂದಿದ್ದು , ಸಂಪೂರ್ಣ ಚಿತ್ರಣ ಪಡೆದಿದ್ದಾರೆಎಂದರು
ಜಿಲ್ಲಾಧಿಕಾರಿ ಮಲೈ ಮುಗಿಲನ್, ಆಪರ್ ಜಿಲ್ಲಾಧಿಕಾರಿ ರಾಜು ಮೊಗವಿರ್, ಸಹಾಯಕ ಆಯುಕ್ತ ದೇವರಾಜ್ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ,ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ, ಪಂಚಾಯತ್ ರಾಜ ವಿಕೆಂದ್ರಕರಣ ಉಪಾಧ್ಯಕ್ಷ ಪ್ರಮೋದ್ ಹೆಗಡೆ, ಕಿರವತ್ತಿಯ ಗ್ರಾಮ ಪಂಚಾಯತಿ ಅದ್ಯಕ್ಷೆ ಮಂಜುಳಾ ವರದಾನಿ,ಪ್ರಮುಖರಾದ ವಿಜಯ ಮಿರಾಶಿ, ರೆಹಮತ್ ಅಬ್ಬಿಗೇರಿ ವೇದಿಕೆಯಲ್ಲಿ ಇದ್ದರು
Leave a Comment