ಉ.ಕ. ಜಿಲ್ಲೆ, ಹೊನ್ನಾವರ ತಾಲೂಕಿನ ಕವಲಕ್ಕಿಯ ಸಮತಾ ಬಳಗ ವು ಮೇ 1ರಂದು ಶ್ರಮಿಕರ ದಿನ ವನ್ನಾಗಿ ಆಚರಿಸುತ್ತಲಿದೆ. ಅದರ ಪ್ರಯುಕ್ತ ಬೆವರಿನ ಬೆಲೆ ಎಂಬ ವಿಷಯವಾಗಿ ಕತೆ/ ಕವಿತೆ/ಲೇಖನ/ಪ್ರಬಂಧಗಳನ್ನು ಆಹ್ವಾನಿಸಿದೆ. ಯಾರು ಬೇಕಾದರೂ ಭಾಗವಹಿಸಬಹುದು.
ಬರಹ ಮೂರು ಪುಟಗಳ ಒಳಗಿರಬೇಕು. ಎಪ್ರಿಲ್ 20ರ ಒಳಗೆ ಕೈಬರಹ ಅಥವಾ ಟೈಪ್ ಮಾಡಿದ ಪ್ರತಿಯನ್ನು ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು: ನಾಗವೇಣಿ ಸುಬ್ರಾಯ ಗೌಡ, ಸ್ವಾತಿ ಕ್ರಿಯೇಷನ್ಸ್, ಮೈತ್ರಿ ಕಾಂಪ್ಲೆಕ್ಸ್, ಬಿಎಚ್ ರಸ್ತೆ, ಕವಲಕ್ಕಿ, ಹೊನ್ನಾವರ ತಾಲೂಕು, ಉ.ಕ. ಜಿಲ್ಲೆ, 581361 mail to: [email protected],[email protected]
ಮೇ 1ನೇ ತಾರೀಖು ಸಂಜೆ ಕವಲಕ್ಕಿಯ ಮೈತ್ರಿ ಕಾಂಪ್ಲೆಕ್ಸ್ ಆವರಣದಲ್ಲಿ ಸಂಜೆ ಆರು ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಗುವುದು. ಮೊದಲ ಮೂರು ಬಹುಮಾನಗಳಿಗೆ ನಗದು, ಭಾಗವಹಿಸಿದ ಎಲ್ಲರಿಗೂ ಪುಸ್ತಕ ಬಹುಮಾನ ಕೊಡಲಾಗುವುದು.
Leave a Comment