ಯಲ್ಲಾಪುರ: ತಾಲೂಕಿನ ನಂದೊಳ್ಳಿಯ ಶ್ರೀ ಸಿದ್ಧಿವಿನಾಯಕ ಗೆಳೆಯರ ಬಳಗ (ಕಬಡ್ಡಿ) ಸಮಿತಿಯ ಆಶ್ರಯದಲ್ಲಿ ಏ.25 ರಂದು ನಂದೊಳ್ಳಿಯ ಪ್ರೌಢಶಾಲಾ ಮೈದಾನದಲ್ಲಿ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾವಳಿ ‘ಹೆಬ್ಬಾರ್ ಟ್ರೋಫಿ’ ನಡೆಯಲಿದೆ. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸುವರು.
ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಗ್ರಾಮೀಣಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ನಂದೊಳ್ಳಿ ಗ್ರಾಪಂ ಅಧ್ಯಕ್ಷ ನರಸಿಂಹ ಕೋಣೆಮನೆ, ಎಲ್. ಎಸ್.ಎಂ.ಪಿ. ಅಧ್ಯಕ್ಷ ನಾಗರಾಜ ಕವಡಿಕೆರೆ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಆರ್.ಎಸ್.ಭಟ್ಟ, ಪ್ರಮುಖರಾದ ವಿವೇಕ ಹೆಬ್ಬಾರ, ಪ್ರಕಾಶ ಹೆಗಡೆ ಲಿಂಗದಬೈಲು, ವಿಜಯ ಮಿರಾಶಿ, ರವಿ ಕೆಟ್ಟರ್, ನ್ಯಾಯವಾದಿ ಜಯರಾಮ ಸಿದ್ದಿ, ಗ್ರಾಪಂ ಸದಸ್ಯರಾದ ಟಿ.ಆರ್.ಹೆಗಡೆ, ನಾಗರತ್ನಾ ನಾಯ್ಕ, ಭವಾನಿ ಸಿದ್ದಿ, ಕಮಲಾ ಸಿದ್ದಿ, ಗೋಪಾಲ ಸಿದ್ದಿ ಮತ್ತಿತರರು ಪಾಲ್ಗೊಳ್ಳುವರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಕಮಲಾ ಸಿದ್ದಿ, ಜಿ.ಎಂ.ತಾಂಡೂರಾಯನ್, ಸಂಧ್ಯಾ ಹಂಗಾರಿ, ನಾರಾಯಣ ಶೇರೂಗಾರ, ಲಕ್ಷ್ಮೀ ಸಿದ್ದಿ, ಅಂತೋನಿ ರೋಡ್ರಿಗ್ಸ್, ಶಾರದಾ ಸಿದ್ದಿ, ಅನಿಲ ಸಿದ್ದಿ, ನಾಗರಾಜ ಸಿದ್ದಿ, ರೋಹನ ತತ್ವಣಗಿ, ಮಹಾಲಕ್ಷ್ಮೀ ಸಿದ್ದಿ, ಅರ್ಪಣಾ ಸಿದ್ದಿ, ಲೀನಾ ಸಿದ್ದಿ ಮುಂತಾದ 13 ವ್ಯಕ್ತಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು.
Leave a Comment