ಮುಂಡಗೋಡ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮುಂಡಗೋಡ ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯ ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಅಹ್ವಾನಿಸಲಾಗಿದೆ
ತಾಲೂಕಿನ ನಾಗನೂರ ಗ್ರಾ.ಪಂ ವ್ಯಾಪ್ತಿಯ ಅಂದಲಗಿ ಗ್ರಾಮದ ಅಂದಲಗಿ-I ಕೇಂದ್ರದಲ್ಲಿ, ಹುನಗುಂದ ಗ್ರಾ.ಪಂ ವ್ಯಾಪ್ತಿಯ ಅತ್ತಿವೇರಿ ಗೌಳಿದಡ್ಡಿ, ಓಣಿಕೇರಿ ಗ್ರಾ.ಪಂ ವ್ಯಾಪ್ತಿಯ ಓಣಿಕೇರಿ ಗ್ರಾಮದ ಓಣಿ ಕೇರಿ-2 ಕೇಂದ್ರದಲ್ಲಿ, ಬಾಚಣಕಿ ಗ್ರಾ.ಪಂ ವ್ಯಾಪ್ತಿಯ ವಡಗಟ್ಟಾ ಗ್ರಾಮದ ಜೇನುಮುರಿ ಕೇಂದ್ರದಲ್ಲಿ ಹಾಗೂ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಂದಾಯ ವಾರ್ಡ್ ನಂ 2 ದ ಇಂದಿರಾನಗರ-2 ಕೇಂದ್ರದಲ್ಲಿ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಸಲ್ಲಿಸುವರು 18-35 ವರ್ಷದೊಳಗಿನ ಅರ್ಹ ಅದೇ ಗ್ರಾಮದ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.
ಅಂಗನವಾಡಿ ಸಹಾಯಕಿಯ ಹುದ್ದೆಗೆ ಕನಿಷ್ಟ 4 ನೇ ಇಯತ್ತೆ ಪಾಸಾಗಿರಬೇಕು ಗರಿಷ್ಠ 9 ನೇ ಇಯತ್ತೆ ತೇರ್ಗಡೆಯಾಗಿರ ಬೇಕು. ಅರ್ಜಿ ಸಲ್ಲಿಸಲು ದಿನಾಂಕ7-04-2022 ರಿಂದ 11-05-2022ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸಲು ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೀಪಾ ಬಂಗೇರ ತಿಳಿಸಿದ್ದಾರೆ
Leave a Comment