ಹಳಿಯಾಳ : ಪಟ್ಟಣದಲ್ಲಿ ಆರ್ ಟಿ ಓ ಏಜೆಂಟ್ ಆಗಿ ಕಾರ್ಯನಿರ್ವಹಿಸಿ, ನಂತರ ನಾಲ್ಕು ವರ್ಷಗಳಿಂದ ಪತ್ರಿಕಾ ವರದಿಗಾರಿಕೆ ಮಾಡುತ್ತಿದ್ದ ನಿಲೇಶ ಮಹಾಜನ (47) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು, ವಿವಾಹಿತ ಸಹೋದರಿ ಹಾಗೂ ಬಂಧುಬಳಗದವರನ್ನು ಅಗಲಿದ್ದಾರೆ. ತಮ್ಮ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ತಮ್ಮ ಕುಟುಂಬವನ್ನು ದುಃಖದ ಮಡುವಿನಲ್ಲಿ ಹಾಕಿ ಇಹಲೋಕ ತ್ಯಜಿಸಿದ್ದಾರೆ.
ಮೃತರ ಅಂತ್ಯಕ್ರಿಯೆಯು ಹಿಂದೂ ಸ್ಮಶಾನದಲ್ಲಿ ನೆರವೇರಿತು. ವೈಶ್ಯವಾಣಿ ಸಮಾಜದವರು, ಪತ್ರಕರ್ತರು, ಹಿತೈಷಿಗಳು ಮೊದಲಾದವರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
Leave a Comment