ಯಲ್ಲಾಪುರ :ತಾಲೂಕಿನ ಅರಬೈಲ್ ಘಟ್ಟದ ಯೂ ಟರ್ನ್ ಬಳಿ ಹಾಲು ತುಂಬಿದ್ದ ಟ್ಯಾಂಕರ್ ವಾಹನವೊಂದು ಬೇಕ್ ಫೇಲ್ ಆದ ಕಾರಣ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್ ಗೆ ಡಿಕ್ಕಿ ಹೊಡೆದುದರ ಪರಿಣಾಮ ಟ್ಯಾಂಕರನಲ್ಲಿದ್ದ ಸಾವಿರಾರು ಲೀಟರ್ ಹಾಲು ರಸ್ತೆ ಪಾಲಾಗಿರುವ ಘಟನೆ ನಡೆದಿದೆ.
ತಮಿಳುನಾಡು ಮೂಲದ ಟ್ಯಾಂಕರ್ ಗಾಡಿ ಇದಾಗಿದ್ದು ಮಹಾರಾಷ್ಟ್ರದ ಕೊಲ್ಲಾಪುರದಿಂದ ಕೇರಳಕ್ಕೆ ಸಾಗುತ್ತಿದ್ದ ಸುಮಾರು 20,000 ಲೀಟರ್ ಹಾಲು ತುಂಬಿದ್ದ ಟ್ಯಾಂಕರ್ ಗಾಡಿ ಪಲ್ಟಿಯಾದ ಹೊಡೆತಕ್ಕೆ ಟ್ಯಾಂಕರ್ ಒಳಗಿದ್ದ ಹಾಲು ಸಂಪೂರ್ಣ ಸೋರಿಕೆಯಾಗಿ ಹಾಲೆಲ್ಲ ರಸ್ತೆ ಪಾಲಾಗಿದೆ.
Leave a Comment