ಯಲ್ಲಾಪುರ: ಕಳೆದವರ್ಷ ಕೊರೊನಾ ಕಾರಣದಿಂದಾಗಿ ರದ್ದಾಗಿದ್ದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಈ ಬಾರಿ ಏ. 22 ರಿಂದ ಮೇ 18ರವರೆಗೆ ನಡೆಯಲಿವೆ.
ತಾಲೂಕಿನಲ್ಲಿರುವ ಐದು ಪದವಿಪೂರ್ವ ಕಾಲೇಜುಗಳಿಗೆ ಪಟ್ಟಣದ ಸರ್ಕಾರಿ ಪಪೂ ಕಾಲೇಜು ಹಾಗೂ ವೈ.ಟಿ.ಎಸ್.ಎಸ್ ಪಪೂ ಕಾಲೇಜುಗಳು ಪರೀಕ್ಷಾ ಕೇಂದ್ರಗಳಾಗಿವೆ. ಐದು ಕಾಲೇಜುಗಳಿಂದ ಒಟ್ಟು 830 ವಿದ್ಯಾರ್ಥಿಗಳಿದ್ದು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 282 ವಿದ್ಯಾರ್ಥಿಗಳು ಹಾಗೂ ವೈ.ಟಿ.ಎಸ್.ಎಸ್ ಪಪೂ ಕಾಲೇಜಿನಲ್ಲಿ 548 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.
ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿದ್ದು ಕೋವಿಡ್ ಸಂಬಂಡಿದಂತೆ ಒಂದು ವಿಶೇಷ ಕೊಠಡಿಯ ವ್ಯವಸ್ಥೆ ಸಹ ಮಾಡಲಾಗಿದೆ. ಎಲ್ಲ ಮುಂಜಾಗ್ರತೆಗಳೊಂದಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದ್ದರಿಂದ ಪರೀಕ್ಷೆ ಆರಂಭ ವಾಗಿ ಸುಸೂತ್ರ ವಾಗಿ ನಡೆಯುತ್ತಿದೆ.
Leave a Comment