ಭಾರತೀಯ ಅಂಚೆ ಇಲಾಖೆಯ ಹೆಸರಲ್ಲಿ ಆನ್ ಲೈನ್ ವಂಚನೆ ನಡೆಯುತ್ತಿದೆ ಎಂಬುವುದನ್ನು ತೃಶೂರು ಸಿಟಿ ಪೊಲೀಸ್ ಸೈಬರ್ ಕ್ರೆöÊಂ ವಿಭಾಗ ಪತ್ತೆಹಚ್ಚಿದೆ.
ಅಂಚೆ ಇಲಾಖೆಯ ಯಥಾರ್ಥ ಮಾಹಿತಿಗಳೆಂದು ತಿಳಿಸುವ ರೀತಿಯಲ್ಲಿ ವಂಚನೆಗಾರರು ಬಿಡುಗಡೆಗೊಳಿಸಿದ ವೆಬ್ ಸೈಟ್ ಲಿಂಕ್ ವಾಟ್ಸಪ್ ಸಹಿತ ಸಾಮಾಜಿಕ ತಾಣಗಳ ಮೂಲಕ ವ್ಯಾಪಕವಾಗಿ ಪ್ರಚಾರ ಮಾಡಿ ವಂಚನೆ ನಡೆಸಲಾಗುತ್ತಿದೆ.
ಸರಕಾರಿ ಸಬ್ಸಿಡಿಗಳನ್ನು ಅಂಚೆ ಇಲಾಖೆ ಮೂಲಕ ವಿತರಿಸಲಾಗುವುದೆಂಬ ರೀತಿಯಲ್ಲಿ ವಾಟ್ಸಪ್ ಮೂಲಕ ಲಿಂಕ್ ಬಿಡುಗಡೆಗೊಳಿಸುವ ತಂಡ ಅದೇ ಲಿಂಕ್ ನಲ್ಲಿ ನಿಮಗೆ 6000 ರೂಪಾಯಿ ಸರಕಾರದ ಸಬ್ಸಿಡಿ ರೂಪದಲ್ಲಿ ಲಭಿಸಲಿದೆಯೆಂಬ ಸಂದೇಶ ಕಳುಹಿಸಿ ಅದಕ್ಕೆ ಅವರು ನೀಡುವ ಪ್ರಶ್ನೆಗಳಿಗೆ ಉತ್ತರಕೇಳಲಾಗುತ್ತಿದೆ. ಅದನ್ನು ಕ್ಲಿಕ್ ಮಾಡುವಾಗ ಭಾರೀ ಮೊತ್ತ ಅಥವಾ ಕಾರು ಬಹುಮಾನವಾಗಿ ಲಭಿಸುವುದೆಂದು ಮಾಹಿತಿ ಲಭಿಸುತ್ತದೆ.
ಈ ಬಹುಮಾನಕ್ಕಾಗಿ ಅವರು ನೀಡುವ ಲಿಂಕ್ ನಾಲ್ಕು ವಾಟ್ಸಪ್ ಗ್ರೂಪ್ಗಳಿಗೆ ಅಥವಾ 20 ವಾಟ್ಸಪ್ ನಂಬ್ರಗಳಿಗೆ ಕಳುಹಿಸುವಂತೆ ತಿಳಿಸಲಾಗುತ್ತದೆ. ಆನಂತರ ಬಹುಮಾನ ನೀಡಲು ನಿಮ್ಮ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಭಾವಚಿತ್ರ, ಪೋನ್ ನಂಬ್ರ ನೀಡುವಂತೆ ತಿಳಿಸಲಾಗುತ್ತಿದೆ. ಆನಂತರ ಪ್ರೊಸೆಸಿಂಗ್ ನಾಮಮಾತ್ರ ಮೊತ್ತ ಕೇಳಲಾಗುತ್ತಿದೆ.
ಲಿಂಕ್ ಗಳ ಮೂಲಕ ಫೋನ್ ಹಾಗೂ ಕಂಪ್ಯೂಟರ್ ನ ನಿಯಂತ್ರಣ ತಮ್ಮ ಕೈಯಲ್ಲಾಗಿಸುವ ವಂಚನೆ ತಂಡ ಅದನ್ನು ಬಳಸುವವರ ಖಾತೆಯಲ್ಲಿರುವ ಹಣವನ್ನು ಹಿಂತೆಗೆಯುತ್ತಿರುವುದಾಗಿ ಸೈಬರ್ ಕ್ರೆöÊಂ ವಿಭಾಗ ಪತ್ತೆಹಚ್ಚಿದೆ.
Leave a Comment