ಯಲ್ಲಾಪುರ : ಕಳೆದ ವರ್ಷ ಸಪ್ಟೆಂಬರ್ ನಲ್ಲಿ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಕಳುವಾದ ಪಲ್ಸರ್ ಬೈಕ್‌ನ್ನು ಪತ್ತೆ ಹಚ್ಚುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಸ.03 ರಂದು ಬಸ್ ನಿಲ್ದಾಣದ ಕ್ಯಾಂಟಿನ್ ಪಕ್ಕದಲ್ಲಿ ನಿಲ್ಲಸಿಟ್ಟ ಕಪ್ಪು ಬಣ್ಣದ ಬಜಾಜ ಪಲ್ಸರ್ ಬೈಕ್ ಕಳುವಾಗಿರುವ ಕುರಿತು ಬಸಯ್ಯ ಶಾಂತಯ್ಯ ಹಿರೇಮಠ ಎನ್ನುವವರು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ತನಿಖೆಯಲ್ಲಿರುವಾಗ ದೊರೆತ ಖಚಿತ ಮಾಹಿತಿಯನ್ನು ಆಧರಿಸಿ ಬಾಲಕನನ್ನು ವಶಕ್ಕೆ ಪಡೆದು, ಆತನಿಂದ ಯಲ್ಲಾಪುರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡಿದ ಪಲ್ಲರ ಮೋಟಾರ ಸೈಕಲ್, ಟಿ.ವಿ.ಎಸ್. ಸ್ಟಾರ್ ಸಿಟಿ ಮೋಟಾರ ಸೈಕಲ್ ಹಾಗೂ ಹುಬ್ಬಳ್ಳಿಯಲ್ಲಿ ಕಳ್ಳತನ ಮಾಡಿದ ಪಲ್ಸರ್ ಮೋಟಾರ ಸೈಕಲ್ ಸೇರಿದಂತೆ ಒಟ್ಟೂ 03 ಮೋಟಾರ ಸೈಕಲ್‌ನ್ನು ಜಪ್ತುಪಡಿಸಿಕೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆಯ ಪಿ.ಐ. ಸುರೇಶ ಯಳ್ಳೂರ ಅವರ ನೇತೃತ್ವದಲ್ಲಿ ಪಿ.ಎಸ್.ಐ, ಮಂಜುನಾಥ ಗೌಡರ, ಪ್ರಿಯಾಂಕಾ ನ್ಯಾಮಗೌಡ, ಪ್ರೋ. ಪಿ.ಎಸ್.ಐ. ಶಶಿಕುಮಾರ ಹಾಗೂ ಸಿಬ್ಬಂದಿಗಳಾದ ಬಸವರಾಜ ಹಗರಿ, ಮಹ್ಮದ ಶಫೀ, ನಾಗಪ್ಪ ಲಮಾಣಿ, ಗಜಾನನ ನಾಯ್ಕ, ಶೋಭಾ ನಾಯ್ಕ ಇವರು ಆರೋಪಿತಯನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.
Leave a Comment