ಹೊನ್ನಾವರ : ತಾಲೂಕಿನ ಸಹಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಮೇಳದ ಉದ್ಘಾಟನೆಯ ಬಂದಿದ್ದ ಶಾಸಕ ದಿನಕರ ಶೆಟ್ಟಿಗೆ, ತಾಲೂಕು ಆಸ್ಪತ್ರೆ ವೈದ್ಯರ ವಿರುದ್ಧ ದೂರು ನೀಡಲು ಬಂದಿದ್ದ ವ್ಯಕ್ತಿಗೆ ನಿನ್ನ ಇತಿಹಾಸ ನನಗೆ ಗೊತ್ತು ಎಂದು ಗದರಿಸಿರುವ ಘಟನೆ ನಡೆದಿದೆ.
ಇತ್ತೀಚಿಗೆ ತಾಲೂಕಾ ಆಸ್ಪತ್ರೆಯ ವೈದ್ಯ ಡಾ. ಮಂಜುನಾಥ ಶೆಟ್ಟಿ ವಿರುದ್ಧ ಹಳದೀಪುರ ಅಗ್ರಹಾರದ ಮಂಜುನಾಥ ಮುಕ್ರಿ ಎನ್ನುವವರು ತನ್ನ ತಾಯಿಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿಯವರಿಗೆ ದೂರು ನೀಡಿದ್ದರು. ಇದೇ ವಿಷಯಕ್ಕೆ ಸಂಬಧಪಟ್ಟAತೆ ಶಾಸಕರ ಗಮನಕ್ಕೆ ತರಲು ಮಾತನಾಡಿಸಿದಾಗ ಶಾಸಕ ಶೆಟ್ಟಿ ಸಿಟ್ಟಿನಿಂದ ದೂರುದಾರರಿಗೆ ಗದರಿಸಿದ್ದಾರೆ.
ಕ್ರಮಕ್ಕೆ ಆಗ್ರಹ : ಶಾಸಕರು ನನ್ನ ಮನವಿಗೆ ಸ್ಪಂದಿಸುವ ಬದಲು ನನಗೆ ಗದರಿಸಿದ್ದಾರೆ. ನನಗೆ ವಕೀಲ, ನಿನ್ನ ಇತಿಹಾಸ ಗೊತ್ತು ಎಂದು ಸಾರ್ವಜನಿಕವಾಗಿ ಹೇಳುತ್ತಾರೆ. ನಾನು ವಕೀಲನಾಗಿದ್ದರೆ ಕೋರ್ಟ್ ನಲ್ಲಿ ನೋಡಿಕೊಳ್ಳತ್ತಿದ್ದೆ. ಇವರ ಹತ್ತಿರ ಏಕೆ ಬರುತ್ತಿದೆ. ಇವರು ಶಾಸಕರಾಗಿದ್ದ ಕಾರಣ ನ್ಯಾಯಕ್ಕಾಗಿ ಇವರ ಹತ್ತಿರ ಬಂದರೆ, ಇವರು ಹೀಗೆ ಮಾತಾಡುತ್ತಾರೆ.
ನನಗೆ ಹೀಗೆ ಹೇಳಿದವರು ಇನ್ನು ನನಗಿಂತ ಕೆಳಗಿನವರಿಗೆ ಏನು ಹೇಳಬಹುದು ಇದು ಶಾಸಕರು ನಡೆದುಕೊಳ್ಳುವ ರೀತಿಯೇ ನನಗೆ ನ್ಯಾಯ ಸಿಗುವವರೆಗೆ ಸುಮ್ಮನಿರುವುದಿಲ್ಲ ಎಂದು ದೂರುದಾರ ಮಂಜುನಾಥ ಮುಕ್ರಿ ಹೇಳಿದ್ದಾರೆ. ಸರಕಾರಿ ವೈದ್ಯರು ಹಣಕ್ಕೆ ಬೇಡಿಕೆ ಇಡುತ್ತಾರೆ. ನಾನು ಬಡವರು ಆರೋಗ್ಯ ಕಾರ್ಡ್ ನಂಬಿ ಆಸ್ಪತ್ರೆಗೆ ಬರುತ್ತೇವೆ. ನಮಗೆ ಖಾಸಗಿ ಆಸ್ಪತ್ರೆಗೆ ಹೋಗಿ ಎಂದು ಹೇಳುತ್ತಾರೆ. ವೈದ್ಯರು, ಶಾಸಕರು ಇನ್ನುಳಿದವರಿಗೆ ಖಾಸಗಿ ಆಸ್ಪತ್ರೆಗೆಯೊಂದಿಗೆ ಹೊಂದಾಣಿಕೆ ಇದೆಯೇ ನನ್ನ ತಾಯಿಯ ಆರೋಗ್ಯ ಇನ್ನೂ ಕೂಡ ಸರಿಯಾಗಿಲ್ಲ. ನಾನು ಎಲ್ಲಿಂದ ಹಣ ತರಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.
Leave a Comment