ಯಲ್ಲಾಪುರ: ಯಲ್ಲಾಪುರ ಉಪ ವಿಭಾಗ ಅರಣ್ಯ ಸೇವೆಗೆ ಸಮರ್ಪಿತವಾದ ವಿಭಾಗವಾಗಿದೆ. ಇಲ್ಲಿಯ ಅಧಿಕಾರಿಗಳು ಸಿಬ್ಬಂದಿಗಳು ಕರ್ತವ್ಯಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡವರಾಗಿದ್ದಾರೆ ಹೀಗಾಗಿ ಹಿರಿಯ ಅಧಿಕಾರಿಗಳಿಗೆ ಇಲ್ಲಿ ಕೆಲಸ ಮಾಡುವುದು ಇನ್ನಷ್ಟು ಸುಲಭವಾಗುತ್ತದೆ ಎಂದು ಎ.೩೦ರಂದು ನಿವೃತ್ತರಾದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲಕೃಷ್ಣ ಹೆಗಡೆ ಹೇಳಿದರು.
ಅವರು ಪಟ್ಟಣದ ಅರಣ್ಯ ಭವನದಲ್ಲಿ ಅರಣ್ಯ ಇಲಾಖೆವತಿಯಿಂದ ಬೀಳ್ಕೊಡುಗೆ ಸಮಾರಂಭದಲ್ಲಿ ತಮಗೆ ನೀಡಿದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಡಿಸಿಎಫ್ ಆಗಿ ಆಗಮಿಸಿದಾಗ ಯಲ್ಲಾಪುರ ಉಪ ವಿಭಾಗದಲ್ಲಿ ೧ ಲಕ್ಷ ೮೫ ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಸಾರ್ವಜನಿಕರು, ಸಿಬ್ಬಂದಿಗಳ ಸಹಕಾರದಿಂದ ಇಲ್ಲಿಯವರೆಗೆ ಒಳ್ಳೆಯ ಹೆಸರಿನೊಂದಿಗೆ ನಿರ್ವಹಿಸಲು ಸಾಧ್ಯವಾಯಿತು. ಅದಕ್ಕಾಗಿ ಎಲ್ಲರಿಗೂ ಕೃತಜ್ಞತೆಗಳು, ಇತ್ತೀಚೆಗೆ ಅರಣ್ಯ ಕಳ್ಳತನ ಕಡಿಮೆಯಾಗಿದೆ. ಆದರೆ ಅದೇ ವಿಶ್ವಾಸದಲ್ಲಿರುವುದು ಬೇಡ, ಸಿಬ್ಬಂದಿಗಳು ಸಧಾ ಜಾಗೃತರಾಗಿರಬೇಕು.ಇಲಾಖೆಯ ಮೇಲೆ ನಂಬಿಕೆಯಿಟ್ಟು ಕೆಲಸಮಾಡುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ತಹಶೀಲ್ದಾರ ಶ್ರೀಕೃಷ್ಣ ಕಾಮರ ಮಾತನಾಡಿ, ಕೆಳ ಹಂತದಿAದ ಮೇಲಾಧಿಕಾರಿಗಳಾದವರಿಗೆ ಸಿಬ್ಬಂದಿಗಳ ಹಾಗೂ ಸಾರ್ವಜನಕರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಗೋಪಾಲಕೃಷ್ಣ ಹೆಗಡೆ ಜನರ ಹಾಗೂ ಸಿಬ್ಬಂದಿಗಳ ಕಷ್ಟ ಅರ್ಥಮಾಡಿಕೊಂಡು ಬಗೆಹರಿಸಿದ್ದರು. ಅವರ ನಿವೃತ್ತಿ ಜೀವನ ಸುಖಃಕರವಾಗಿರಲಿ ಎಂದು ಹಾರೈಸಿದರು.
ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಮಾತನಾಡಿ, ಅರಣ್ಯ ಇಲಾಖೆಯ ಯಲ್ಲಾಪುರ ಉಪ ಅರಣ್ಯ ಅಧಿಕಾರಿಗಳಾಗಿ ಕೆಲಸಮಾಡುವುದು ಪ್ರತಿಷ್ಠೆಯ ಸಂಕೇತವಾಗಿದೆ. ಗೋಪಾಲಕೃಷ್ಣ ಹೆಗಡೆಯವರು ಈ ವಿಭಾಗದ ಗೌರವವನ್ನುಇನ್ನಷ್ಟು ಹೆಚ್ಚಿಸಿದರು ಎಂದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ ಅಭಿಪ್ರಾಯವ್ಯಕ್ತಪಡಿಸಿ, ಗೋಪಾಲಕೃಷ್ಣ ಹೆಗಡೆಯವರೊಟ್ಟಿಗೆ ಕೆಲಸ ಮಾಡುವುದು ನನ್ನ ಭಾಗ್ಯ ಅವರು ತಾಳ್ಮೆ, ಕೆಳ ಹಂತದ ಅಧಿಕಾರಿಗಳು ಸಿಬ್ಬಂದಿಗಳನ್ನು ನೋಡಿಕೊಳ್ಳುವ ಪರಿ ನಮಗೆಲ್ಲರಿಗೂ ಮಾದರಿಯಾಗಿದೆ ಎಂದರು.
ವಲಯ ಅರಣ್ಯಾಧಿಕಾರಿ ಬಾಲಸುಬ್ರಹ್ಮಣ್ಯಂ ಅಭಿಪ್ರಾಯಪಟ್ಟು, ಯಲ್ಲಾಪುರಕ್ಕೆ ವಲಯ ಅರಣ್ಯ ಅಧಿಕಾರಿಯಾಗಿ ಆಗಮಿಸಿದಾಗ ಈ ಭಾಗದ ಎಲ್ಲ ವಿಷಯಗಳ ಮಾಹಿತಿ ನೀಡಿ ಮಾರ್ಗದರ್ಶನ ಮಾಡಿದರು. ಅರಣ್ಯ ಇಲಾಖೆಯ ಸೇವೆಯಲ್ಲಿ ನನಗೆ ಗುರುವಾಗಿ ಮಾರ್ಗದರ್ಶನ ನೀಡಿದರು ಎಂದರು.
ಎಸಿಎಫ್ ಆನಂದ ಎಚ್ ಎ, ಡಿಸಿಎಫ್ ಕಚೇರಿಯ ವ್ಯವಸ್ಥಾಪಕ ಸಂತೋಷ ದೇಸಾಯಿ, ಡಿಆರ್.ಎಫ್.ಓ ಅಲ್ತಾಫ್ ಚೌಕಡಾಕ್, ಮಂಜುನಾಥ ಮರಿಬಸಗೋಳ ಮುಂತಾದವರು ಮಾತನಾಡಿದರು,
ಗೋಪಾಲಕೃಷ್ಣ ಹೆಗಡೆಯವರ ಧರ್ಮಪತ್ನಿ ರೂಪಾ ಹೆಗಡೆ, ಮುಂಡಗೋಡ ಎಸಿಎಫ್ ಎಸ್.ಎಂ ವಾಲಿ, ಶಿಸ್ತುಮುಡಿ ವಿಎಫ್‌ಸಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ವೇದಿಕೆಯಲ್ಲಿದ್ದರು.
ವಲಯ ಅರಣ್ಯಾಧಿಕಾರಿಗಳಾದ ನದಾಪ್ ಕಿರವತ್ತಿ, ಪ್ರಸಾದ ಪೆಡ್ನೇಕರ, ದಿನೇಶ ಮಿರ್ಜಾನಕರ, ಶೀಲ್ದಾ ನಾಯಕ, ನಿವೃತ್ತ ತಹಶೀಲ್ದಾರ ಡಿ.ಜಿ.ಹೆಗಡೆ, ಸಾಮಾಜಿಕ ಕಾರ್ಯಕರ್ತ ಮಹಮ್ಮದ ಗೌಸ್, ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಡಿಆರ್‌ಎಫ್.ಓ ಶಹನವಾಜ ಮುಲ್ತಾನ ಪ್ರಾರ್ಥಿಸಿದರು. ಎಸಿಎಫ್ ಅನಂದ ಎಚ್ ಎ ಸ್ವಾಗತಿಸಿದರು. ಅರಣ್ಯ ಸಿಬ್ಬಂದಿ ಶ್ರೀಶೈಲ ನಿರೂಪಿಸಿ ವಂದಿಸಿದರು.
Leave a Comment