ಯಲ್ಲಾಪುರ: ಇತ್ತೀಚೆಗೆ ಬೆಂಗಳೂರಿನಲ್ಲಿ ಮಲೆನಾಡು ಸೌರಭ ಟ್ರಸ್ಟ ನ ವತಿಯಿಂದ ಡಾ ರಾಜಕುಮಾರ ಜನುಮದಿನದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ ಇಡಗುಂದಿ ಯ ತಾಳಮದ್ದಳೆ ಕಲಾವಿದೆ ಸುಕನ್ಯಾ ವಿಶ್ವನಾಥ ಭಟ್ಟ ಸಂಪೆಬೈಲ್ ಅವರನ್ನು ಮಲೆನಾಡ ಪ್ರತಿಭೆ ಎಂದು ಗುರುತಿಸಿ ಸ್ಮರಣಿಕೆ, ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸಂಸ್ಥಾಪಕರಾದ ,ಗಾಯಕ ಮಲ್ನಾಡ ಮುರುಳಿ ಹಾಗೂ ಕಾರ್ಯದರ್ಶಿ ಕೆ.ಎಸ್ ನಾಗಭೂಷಣ ,ಗುರು ಪೌಂಡೇಶನ್ ಸಂಸ್ಥಾಪಕ ಭರತ, ವಾಯ್ಸ ಆಪ್ ಮಲೆನಾಡು ಸದಸ್ಯ ಎಂ. ಎಸ್ ರಾಜೇಂದ್ರ ಹೆಗಡೆ, ಸುವರ್ಣ ರಘುನಾಥ,ವಿಶ್ವನಾಥ ಭಟ್ ಉಪಸ್ಥಿತರಿದ್ದರು
Leave a Comment