ಯಲ್ಲಾಪುರ :ಮಹಾಮಾರಿ ಕರೋನಾದಿಂದ
ಎರಡು ವರ್ಷಗಳ ಕಾಲ ನಮ್ಮಮಕ್ಕಳ ಕಲಿಕೆಯಲ್ಲಾದ ನಷ್ಟವನ್ನು ತುಂಬುವ ಉದ್ದೇಶದಿಂದ ನಮ್ಮ ಶಿಕ್ಷಣ ಇಲಾಖೆಯು ಜಾರಿಗೆ ತಂದ ವಿನೂತನ ಯೋಜನೆಯೇ ಈ “ಕಲಿಕಾ ಚೇತರಿಕೆ”ಯಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಶ್ರೀರಾಮ ಹೆಗಡೆ ಹೇಳಿದರು
ಅವರು ಬುಧವಾರ ಪಟ್ಟಣದ ಮಾದರಿ ಉರ್ದುಶಾಲೆಯಲ್ಲಿ ಶಿಕ್ಷಣ ಇಲಾಖೆಯ “ಕಲಿಕಾ ಚೇತರಿಕೆ” ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ
ಶಿಬಿರಾರ್ಥಿಗಳಿಗೆ ಕಲಿಕಾ ಚೇತರಿಕೆಯ ಉದ್ದೇಶ, ಮತ್ತು ಅದರ ಮಹತ್ವವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕ ಉಮಾಪತಿ ಎನ್ ಎಚ್,ಬಿ,ಆರ್,ಪಿ ಗಳಾದ ಪ್ರಶಾಂತ ಪಟಗಾರ, ಸಂತೋಷ ಜಿಗಳೂರ ಹಾಗೂ ಎಲ್ಲಾ ವಿಷಯಗಳ ಸಂಪನ್ಮೂಲ ವ್ಯಕ್ತಿಗಳು,ಶಿಕ್ಷಕರು ಉಪಸ್ಥಿತರಿದ್ದರು.
“ಹಿಂದಿ” ವಿಷಯದ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಳಾದ ಗಂಗಾಧರ ಲಮಾಣಿ,ಹಾಗೂ ಇಂದಿರಾ ಎನ್ ಎಚ್ ರವರ ಮಾರ್ಗದರ್ಶನದಲ್ಲಿ ಶಿಕ್ಷಕ ಶಿಬಿರಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.ಪ್ರಶಾಂತ ಪಟಗಾರ ನಿರೂಪಿಸಿದರು, ಸಂತೋಷ ಜಿಗಳೂರ ರವರು ವಂದಿಸಿದರು
Leave a Comment