
ಯಲ್ಲಾಪುರ : ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಸ್ಕೇಟಿಂಗ್ ಮೂಲಕವಾಗಿ ಕಾರವಾರದಿಂದ ಬೆಂಗಳೂರಿಗೆ ಆಗಮಿಸಿದ ಮಕ್ಕಳನ್ನು ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ವಿಧಾನಸೌಧದ ಮುಂಭಾಗದಲ್ಲಿ ಸ್ವಾಗತಿಸಿದರು.

ಯಲ್ಲಾಪುರದ 9 ಮಕ್ಕಳು ಸೇರಿದಂತೆ 63 ಮಕ್ಕಳು ಕಾರವಾರದಿಂದ 620 ಕಿಲೋಮೀಟರ್ ಸ್ಕೇಟಿಂಗ್ ಮೂಲಕ ಬೆಂಗಳೂರು ತಲುಪಿದ್ದು, ಸಚಿವರು ಮಕ್ಕಳಿಗೆ ಅಭಿನಂದನಾ ಪತ್ರವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ.ನಾರಾಯಣಗೌಡ, ಕಾರ್ಮಿಕ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯ ನಿರ್ವಾಹಣಾಕಾರಿ ಗುರುಪ್ರಸಾದ ಎಮ್.ಪಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಸ್ಕೇಟಿಂಗ್ ಪಟುಗಳು ಉಪಸ್ಥಿತರಿದ್ದರು.
Leave a Comment