‘ಯಲ್ಲಾಪುರ:ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಸಹಜ, ಸೇವೆಯ ಕೊನೆಯಲ್ಲಿ ಸೇವೆಯ ಮಹತ್ವ ಗೊತ್ತಾಗುತ್ತದೆ. ಗ್ರಾಮಸ್ತರ ನೋವು, ನಲಿವು ತಿಳಿದುಕೊಂಡು ಅರಣ್ಯ ರಕ್ಷಣೆಯ ಮಹತ್ವವನ್ನು ನಾಗಪ್ಪ ಅವರು ತಿಳಿವಳಿಕೆ ನೀಡುತ್ತಿದ್ದರು.’ ಎಂದು ರಾಮಾಪುರ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಪಾಂಡುರಂಗ ಪಂಡರಾಪುರ ಹೇಳಿದರು.
ರಾಮಾಪುರದಲ್ಲಿ ರಾಮಾಪುರ ಗ್ರಾಮ ಅರಣ್ಯ ಸಮಿತಿ ವತಿಯಿಂದ ನಿವೃತ್ತರಾದ ಅರಣ್ಯ ರಕ್ಷಕ ನಾಗಪ್ಪ ಕುಂದರ್ಗಿ ದಂಪತಿಯನ್ನು ಸನ್ಮಾನಿಸಿ ಗೌರವಿಸಿ ಅವರು ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ನಾಗಪ್ಪ ಕುಂದರ್ಗಿ ಮಾತನಾಡಿ, ‘ಹಿರಿಯ ಕಿರಿಯ ಅಧಿಕಾರಿಗಳ ಸಹಕಾರದಿಂದ ಉತ್ತಮವಾಗಿ 24 ವರ್ಷಗಳ ಕಾಲ ಸೇವೆ ಸಲ್ಲಿಸಲು ಸಾಧ್ಯವಾಯಿತು. ಗ್ರಾಮ ಅರಣ್ಯ ಸಮಿತಿಯವರೂ ಅರಣ್ಯ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಾರಣ ನನ್ನ ಕಾರ್ಯ ಸರಳವಾಯಿತು ಎಂದರು.
ಉಪವಲಯ ಅರಣ್ಯಾಧಿಕಾರಿ ಅಲ್ತಾಫ್ ಎನ್.ಸಿ. ಮಾತನಾಡಿ ಶುಭ ಕೋರಿದರು.
ಅರಣ್ಯ ಇಲಾಖೆಯ ಶರಣಪ್ಪ, ಸಂತೋಷ, ಬಸಲಿಂಗಪ್ಪ, ಸಂತೋಷ ಕರಕಶೆಟ್ಟಿ, ಗ್ರಾಮ ಅರಣ್ಯ ಸಮಿತಿಯ ಶಂಕರ ಪಾಟೀಲ, ಅಣ್ಣಪ್ಪ ಪಾಟೀಲ್, ಪಂಚಾಕ್ಷರಿ, ಡುಮ್ಮ ಮರಾಠಿ, ಮಂಜುನಾಥ ಮರಾಠಿ ಮುಂತಾದವರಿದ್ದರು.ಶಶಿಕಾಂತ ಪಾಟೀಲ್ ಸ್ವಾಗತಿಸಿದರು, ಗಣೇಶ್ಚಂದ್ರ ಪಂಡರಾಪುರ ನಿರೂಪಿಸಿ, ವಂದಿಸಿದರು..
Leave a Comment