ಯಲ್ಲಾಪುರ:ಹಾಸಣಗಿ ಸೇವಾ ಸಹಕಾರಿ ಸಂಘ, ರಾಜ ರಾಜೇಶ್ವರಿ ವಿದ್ಯಾ ಸಂಸ್ಥೆ ಹಾಗೂ ರಂಗ ಸಮೂಹಗಳ ಸಹಕಾರದೊಂದಿಗೆ ಮೇ 15 ಮತ್ತು 16ರಂದು ಸಂಜೆ 7 ಗಂಟೆಗೆ ನಾಟಕ ಪ್ರದರ್ಶನ ನಡೆಯಲಿದೆ. ಮಂಚಿಕೇರಿಯ ಸಂಹತಿ ಬಳಗದವರಿಂದ ಮಂಚೀಕೇರಿಯ ರಾಜ ರಾಜೇಶ್ವರಿ ರಂಗಮಂದಿರದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕಥೆ ಆಧಾರಿತ `ಕೃಷ್ಣೇಗೌಡನ ಆನೆ’ ನಾಟಕ ಪ್ರದರ್ಶನಗೊಳ್ಳಲಿದೆ.
ಈ ನಾಟಕದ ಪರಿಕಲ್ಪನೆ, ವಿನ್ಯಾಸ ಹಾಗೂ ನಿರ್ದೇಶನ ವಿನಾಯಕ ಭಟ್ಟ ಹಾಸಣಗಿ ಇವರದಾಗಿದೆ. ಸ್ಥಳೀಯ ರಂಗಕಲಾವಿದರಾದ ಜಿ.ಆರ್.ಭಟ್ಟ, ಸುಬ್ರಹ್ಮಣ್ಯ ಹೆಗಡೆ, ಎಂ.ಕೆ.ಭಟ್ಟ, ವಾಸುಕಿ ಹೆಗಡೆ, ವೆಂಕಟರಮಣ ಹೆಗಡೆ ಗೋರ್ಸಗದ್ದೆ, ದೀಪ್ತಿ ರಮೇಶ, ರಾಜಶೇಖರ ಹೆಗಡೆ, ವೆಂಕಟರಮಣ ಶಾಸ್ತ್ರಿ, ನಾಗೇಂದ್ರ ಶಾಸ್ತ್ರಿ, ಪ್ರಕಾಶ ಭಟ್ಟ, ಪ್ರಸಾದ ಭಟ್ಟ, ನಾಗೇಂದ್ರ ಹೆಗಡೆ, ನಾರಾಯಣ ಭಟ್ಟ ವಿವಿಧ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.
ತಾಂತ್ರಿಕ ವರ್ಗದಲ್ಲಿ ವೆಂಕಟರಮಣ ಹೆಗಡೆ, ರಂಗ ಸಜ್ಜಿಕೆಯಲ್ಲಿ ಜಿ.ಆರ್.ಭಟ್ಟ , ಪ್ರಕಾಶ ಭಟ್ಟ,ರಂಗ ಪರಿಕರದಲ್ಲಿ ನಾರಾಯಣ ಭಟ್ಟ , ನಾಗೇಂದ್ರ ಹೆಗಡೆ, ವಸ್ತ್ರಾಲಂಕಾರದಲ್ಲಿ ವೆಂಕಟರಮಣ ಶಾಸ್ತ್ರಿ , ಪ್ರಕಾಶ ಭಟ್ಟ,ಸಂಗೀತ ಮತ್ತು ನಿರ್ವಹಣೆಯಲ್ಲಿ ಪ್ರಸಾದ ಭಟ್ಟ , ರಾಜಶೇಖರ ಹೆಗಡೆ, ದೀಪ್ತಿ ರಮೇಶ (ಪ್ರಸಾಧನ), ಎಂ.ಕೆ.ಭಟ್ಟ, ವಾಸುಕಿ (ಬೆಳಕು), ಜನಾರ್ಧನ ಹೆಗಡೆ, ಎಸ್.ಎನ್.ಭಟ್ಟ, ನಾಗರಾಜ ಹೆಗಡೆ (ಪ್ರಚಾರ ನಿರ್ವಹಣೆ), ನಾಗೇಂದ್ರ ಶಾಸ್ತ್ರಿ, ವಾಸುಕಿ ಹೆಗಡೆ (ರಂಗ ನಿರ್ವಹಣೆ), ಜಿ.ಎನ್.ಶಾಸ್ತ್ರಿ (ಸಂಚಾಲಕರು) ಕಾರ್ಯ ನಿರ್ವಹಿಸುವರು
Leave a Comment