ಹೊನ್ನಾವರ : ತಾಲೂಕಿನ ಚಿಕ್ಕನಕೋಡ ಗುಂಡಿಗದ್ದೆಯಲ್ಲಿ ವ್ಯಕ್ತಿಯೊರ್ವ ತೆಂಗಿನಕಾಯಿ ಕೊಯ್ಯುತ್ತಿದ್ದಾಗ ಆಕಸ್ಮಿಕವಾಗಿ ತೆಂಗಿನ ಮರದಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ತಿಪ್ಪಯ್ಯ ರಾಮಚಂದ್ರ ನಾಯ್ಕ (65) ಮೃತಪಟ್ಟ ವ್ಯಕ್ತಿ. ಚಿಕ್ಕನಕೋಡದ ಶೇಖರ ನಾರಾಯಣ ನಾಯ್ಕ ಎಂಬುವವರ ತೋಡದಲ್ಲಿ ಘಟನೆ ನಡೆದಿದೆ. ತೆಂಗಿನ ಮರದಿಂದ ಬಿದ್ದು ಅಸ್ವಸ್ಥಗೊಂಡವನಿಗೆ ಚಿಕಿತ್ಸೆಗೆಂದು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತ ಪಟ್ಟಿದ್ದಾನೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Leave a Comment