
ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿಯ ಹೊನ್ನಗದ್ದೆ ವೀರಭದ್ರ ದೇವಸ್ಥಾನದ ಸಂಪ್ರೋಕ್ಷಣಾ ಕಾರ್ಯಕ್ರಮ ದ ನಿಮಿತ್ತ ನಡೆದ ರಾಜಾ ರುದ್ರಕೋಪ ಯಕ್ಷಗಾನ ಪ್ರಸಂಗವು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.
ರುದ್ರಕೋಪನಾಗಿ ಕಾರ್ತಿಕ ಚಿಟ್ಟಾಣಿ, ಚಿತ್ರಾಕ್ಷಿಯಾಗಿ ಯುವ ಸ್ರ್ತೀ ವೇಷ ಕಲಾವಿದ ನಾಗರಾಜ ಭಟ್ಟ ಕುಂಕಿಪಾಲ ತಮ್ಮ ಚುರುಕಿನ ಅಭಿನಯದೊಂದಿಗೆ ರಂಗಸ್ಥಳವನ್ನು ವೈಭಯುತವಾಗಿ ಸಾಕ್ಷಾತ್ಕರಿಸಿದರು. ರಕ್ತಜಂಘನಾಗಿ ಸಂಜಯ ಬಿಳಿಯೂರು,ನಾರದನಾಗಿ ಅಶೋಕ ಭಟ್ಟ ಸಿದ್ದಾಪುರ, ಚಂದ್ರ ಸೇನನಾಗಿ ಮಂಜುನಾಥ ಗಾಂವ್ಕಾರ ಮುಲೆಮನೆ,ಸತ್ಯ ಶೀಲೆಯಾಗಿ ಇಟಗಿ ಮಾಬ್ಲೇಶ್ವರ ಭಟ್ಟ, ಅಜ್ಜಿಯ ಪಾತ್ರದಲ್ಲಿ ಮಾಹಾಬಲೇಶ್ವರ ಭಟ್ಟ ಕ್ಯಾದಗಿ, ರಕ್ತ ಕೇಶಿಯಾಗಿ ಗಣಪತಿ ಕುಣಬಿ ಬಾರೆ,ಸಖಿಯ ಪಾತ್ರದಲ್ಲಿ ದೀಪಕ್ ಕುಂಕಿ ಅತ್ಯುತ್ತಮವಾಗಿಪಾತ್ರ ನಿರ್ವಹಿಸಿದರು.

ಹಿಮ್ಮೇಳದಲ್ಲಿ ಭಾಗವತರಾಗಿ ರಾಘವೇಂದ್ರ ಆಚಾರಿ ಜನ್ಸಾಲೆ ಯವರ ಸುಶ್ರಾವ್ಯ ಪದ್ಯಕ್ಕೆ ನರಸಿಂಹ ಭಟ್ಟ, ಹಂಡ್ರಮನೆ ಯವರ ಮದ್ದಳೆ, ಗಣೇಶ ಗಾಂವ್ಕಾರ ರರ ಚಂಡೆವಾದನ ಮೆರಗು ನೀಡಿತು
Leave a Comment