ಯಲ್ಲಾಪುರ :ತಾಲೂಕಿನ ಬಿಸಗೋಡ ಸರ್ಕಾರಿ ಪ್ರೌಢಶಾಲೆ ಪ್ರಸ್ತುತ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಯಲ್ಲಿ .ಕಾರ್ತಿಕೇಯ ಗಣೇಶ ಹೆಗಡೆ 611 (97.76%)ಅಂಕಗಳೊಡನೆ ಪ್ರಥಮ, ದೀಕ್ಷಾ ಮಂಜುನಾಥ ಹೆಗಡೆ 583(93.28%) ಅಂಕಗಳೊಡನೆ ದ್ವಿತೀಯ, ಹಾಗೂ ರಕ್ಷಿತ ಗಣೇಶ ಮೆಣಸುಮನೆ 579 (92.64%) ಅಂಕಗಳೊಡನೆ ತೃತೀಯ ಸ್ಥಾನಗಳನ್ನು ಪಡೆದಿದ್ದಾರೆ.
ಪರೀಕ್ಷೆಗೆ ಹಾಜರಾದ 26 ವಿದ್ಯಾರ್ಥಿಗಳಲ್ಲಿ 7ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ 13 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 4 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಹಾಗೂ ಇಬ್ಬರು ವಿದ್ಯಾರ್ಥಿಗಳು ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾಗಿ, ಶಾಲೆಯು “ಎ” ದರ್ಜೆಯಲ್ಲಿರುವಂತೆ ಸಾಧನೆ ಮಾಡಿದ್ದಾರೆ.
ಸಾಧನೆಗೈದ ವಿದ್ಯಾರ್ಥಿಗಳಿಗೆ ಮುಖ್ಯಾಧ್ಯಾಪಕರು ಶಿಕ್ಷಕರು ಹಾಗೂ ಎಸ್.ಡಿ.ಎಮ್.ಸಿಯ ಸದಸ್ಯರು ಶುಭ ಹಾರೈಸಿದ್ದಾರೆ. ಉತ್ತಮ ಶಿಕ್ಷಕ ಸಮೂಹ ಹೊಂದಿರುವ ಈ ಶಾಲೆಯು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ವಿದ್ಯಾರ್ಥಿಗಳು ಹಿಂದಿನ ವರ್ಷಗಳಲ್ಲಿ ರಾಜ್ಯಮಟ್ಟದ ರ್ಯಾಂಕ ಗಳಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
Leave a Comment