ಚಿಕನ್ ಸಾರು ಮಾಡದ ಕಾರಣ ವ್ಯಕ್ತಿಯೊಬ್ಬ ತನ್ನ ಪತ್ನಿಯನೇ ಕೊಲೆ ಮಾಡಿರುವ ಘಟನೆ ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದಲ್ಲಿ ನಡೆದಿದೆ.
ಶೀಲಾ ಕೊಲೆಯಾದ ಮಹಿಳೆ. ಕೆಂಚಪ್ಪ ಕೊಲೆ ಮಾಡಿದ ಆರೋಪಿ ಎನ್ನಲಾಗಿದೆ ರೋಡ್ ರೋಲರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಕೆಂಚಪ್ಪ ಪಕ್ಕದ ವಾಸನ ಗ್ರಾಮದ ಶೀಲಾಳನ್ನು ಪ್ರೀತಿಸಿ, ಕುಟುಂಬದವರ ವಿರೋಧದ ನಡುವೆಯೂ ಒಂಭತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ. ದಂಪತಿ ಒಂದು ಮಗುವಿದೆ. ಇದಕ್ಕೂ ಮೊದಲು ಕೆಂಚಪ್ಪನಿಗೆ ಮದುವೆಯಾಗಿದೆ.
ಮೊದಲ ಹೆಂಡತಿಗೆ ಮಕ್ಕಳಾಗದ ಕಾರಣ, ಇನ್ನೊಂದು ಮದುವೆಯಾಗಿರುವುದು ಶೀಲಾಗೆ ತಿಳಿದು ರಾದ್ಧಾಂತವಾಗಿತ್ತು. ನಂತರ ಚಿಕ್ಕಪುಟ್ಟ ವಿಚಾರಕ್ಕೂ ದಂಪತಿ ನಡುವೆ ಕಲಹ ನಡೆಯುತ್ತಿತ್ತೆನ್ನಲಾಗಿದೆ.
ಕೆಂಚಪ್ಪ ಕೂಡ ದಿನಂಪ್ರತಿ ಮಧ್ಯ ಸೇವನೆ ಮಾಡಿ ಗಲಾಟೆ ಮಾಡುತ್ತಿದ್ದ. ಇದರಿಂದ ಶೀಲಾ ತನ್ನ 4 ವರ್ಷದ ಮಗಳನ್ನು ವಾಸನದಲ್ಲಿರುವ ತಾಯಿ ಮನೆಯಲ್ಲಿಯೇ ಬಿಟ್ಟಿದ್ದಳು.
ಜೂ. 7 ರ ಮಂಗಳವಾರ ಮಗಳ ಜನ್ಮದಿನವನ್ನು ತವರು ಮನೆಯಲ್ಲಿಯೇ ಮಾಡಿ ಬುಧವಾರ ಬನ್ನಿಕೋಡಿಗೆ ವಾಪಸ್ಸಾಗಿದ್ದಳು. ಮಗಳ ಜನ್ಮದಿನದಲ್ಲೂ ಕೂಡ ಕೆಂಚಪ್ಪ ಪಾಲ್ಗೊಂಡಿರಲಿಲ್ಲ. ಬುಧವಾರ ರಾತ್ರಿ ಮತ್ತೆ ಮಧ್ಯಸೇವನೆ ಮಾಡಿ ಬಂದ ಕೆಂಚಪ್ಪ ಹೆಂಡತಿಗೆ ಚಿಕನ್ ಸಾರು ಮಾಡಿಲ್ಲ ಎಂದು ಜಗಳ ಶುರು ಮಾಡಿದ್ದಾನೆ. ಆ ಜಗಳ ತಾರಕಕ್ಕೇರಿದ ಪರಿಣಾಮ ಅಲ್ಲಿದ್ದ ಚಾಕು ತೆಗೆದುಕೊಂಡು ಹೆಂಡತಿಗೆ ಇರಿದು ಕೊಲೆ ಮಾಡಿದ್ದಾನೆ. ಈ ಸಂಬAಧ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment