ಮುರ್ಡೇಶ್ವರದ ಗುಮ್ಮನಹಕ್ಕಲ ನಿವಾಸಿ ಹೋಟೆಲ್ ಉದ್ಯಮಿ ದಿನೇಶ ಈರಪ್ಪ ನಾಯ್ಕ ಮೃತಪಟ್ಟವರು ಎಂದು ತಿಳಿದು ಬಂದಿದೆ.
ದಿನೇಶ ಈರಪ್ಪ ನಾಯ್ಕ ಬೈಕಿನಲ್ಲಿ ಮುರ್ಡೇಶ್ವರದಿಂದ ಗುಮ್ಮನಹಕ್ಕಲಿನಲ್ಲಿರುವ ತನ್ನ ಮನೆಗೆ ಹೋಗುವಾಗ ದಾರಿಯಲ್ಲಿ ಬೈಕ್ ಸ್ಕಿಡ್ ಆಗಿದೆ. ಪರಿಣಾಮ ಕೆಳಕ್ಕೆ ದಿನೇಶ್ ಅವರ ತಲೆಗೆ ತೀವ್ರ ತರದ ಏಟಾಗಿದೆ. ರಾತ್ರಿ ಆದ ಕಾರಣ ದಾರಿಯಲ್ಲಿ ಯಾರೂ ಇಲ್ಲದಿರುವುದಕ್ಕೆ ರಕ್ರಸ್ರಾವವಾಗಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

ಬೆಳಗ್ಗೆ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದವರು, ದಿನೇಶ್ ನನ್ನು ನೋಡಿ ಕೂಡಲೇ ಠಾಣೆಗೆ ತಿಳಿಸಿ, ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟೊತ್ತಿಗೆ ಮೃತ ಪಟ್ಟಿರುವ ಬಗ್ಗೆ ವೈದ್ಯರು ಖಚಿತ ಪಡಿಸಿದ್ದಾರೆ.
ನಂತರ ಮುರ್ಡೇಶ್ವರದಲ್ಲಿಯೇ ಶವಪರೀಕ್ಷೆಯನ್ನು ನಡೆಸಲಾಯಿತು. ಈ ಕುರಿತು ದಿನೇಶ್ ಸಹೋದರ ಶ್ರೀಧರ ಮೋಹನ ನಾಯ್ಕ ಎನ್ನುವವರು ಮುರ್ಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದು, ಅಪಫಾತದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ.
Leave a Comment