ಕಾರವಾರ: ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಜಿಲ್ಲೆಯ ತಾಲೂಕುಗಳಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯಾಗಿ ಸೇವೆ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕುಮಟಾ ತಾಲೂಕಿನ ಕತಗಾಲ್, ದಿವಳಿ, ಅಂಕೋಲಾ ತಾಲೂಕಿನ ಮೊಗಟಾ, ಹೊನ್ನಾವರ ತಾಲೂಕಿನ ಗೇರುಸೊಪ್ಪಾ, ಜೊಯಿಡಾ ತಾಲೂಕಿನ ಚಂಡೆವಾಡಿ, ಯಲ್ಲಾಪುರ ತಾಲೂಕಿನ ಕಳಚೆ, ಮಾವಿನಮನೆ ಹೋಬಳಿಯ ಪ್ರದೇಶಗಳ ಆಸಕ್ತ ಅಭ್ಯರ್ಥಿಗಳು ಜೂ.30ರೊಳಗಾಗಿ ಆಯಾ ಗ್ರಾಮ ಪಂಚಾಯತ/ ಗ್ರಾಮ ಸಭೆಯಿಂದ ವಾರ್ಡ್ ಮಟ್ಟದಿಂದ ಆಯ್ಕೆಗೊಂಡು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖಾಂತರ ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಯು ಗ್ರಾಮ ಅಥವಾ ವಾರ್ಡ್ ನ ಸ್ಥಳೀಯ ನಿವಾಸಿಯಾಗಿರಬೇಕು.
ವಿವಾಹಿತ ಮಹಿಳೆ ಅಥವಾ ವಿಧವೆಯಾಗಿರಬೇಕು. ವಯಸ್ಸು 25- 45 ವಯೋಮಿತಿಯೊಳಗೆ ಇರಬೇಕು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿರಬೇಕು. ಪಿಯುಸಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಶಾಶ್ವತ ಕುಟುಂಬ ಕಲ್ಯಾಣ ಯೋಜನೆಯನ್ನು ಅಳವಡಿಸಿಕೊಂಡಿರಬೇಕು.
ಪರಿಣಾಮಕಾರಿಯಾದ ಸಂವಹನ ಕೌಶಲ್ಯ, ಉತ್ತಮ. ನಾಯಕತ್ವಗುಣ ಹಾಗೂ ಸಮುದಾಯದೊಂದಿಗೆ ಸ್ಪಂದಿಸುವ ಗುಣಲಕ್ಷಣಗಳನ್ನು ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment