ಮಂಗಳೂರು : ಎದೆಹಾಲು ಮಗುವಿನ ಪ್ರಾಣಕ್ಕೆ ಕಂಟಕವಾದ ಘಟನೆ ಕಾಸರಗೋಡು ಕುಂಬಳೆ ಸಮೀಪದ ಮಧೂರಿನಲ್ಲಿ ನಡೆದಿದೆ. ಮಧೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಉತ್ತರ ಪ್ರದೇಶ ನಿವಾಸಿ ಅಪ್ತಾಬ್ ಅವರ ಪುತ್ರಿ ಒಂದೂವರೆ ವರ್ಷದ ಇನಿಯ ಕಾರ್ತೋನ್ ಜೀವ ಕಳೆದುಕೊಂಡ ಮಗು.
ತಾಯಿ ಎದೆಹಾಲನ್ನು ಮಗುವಿಗೆ ಉಣಿಸುತ್ತಿರುವಾಗ ಹಾಲು ಗಂಟಲಲ್ಲಿ ಸಿಲುಕಿ ಮಗು ಒದ್ದಾಡಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Leave a Comment