ಯಲ್ಲಾಪುರ:
ಜೂನ್ 21 ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪತಂಜಲಿ ಯೋಗ ಸಮಿತಿ ಯಲ್ಲಾಪುರ ಇವರ ನೇತೃತ್ವದಲ್ಲಿ ಯೋಗ ತರಬೇತಿ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ. ಎಪಿಎಂಸಿ ಅಡಿಕೆ ಭವನದಲ್ಲಿ 20/6/2022 ರವರೆಗೆ ಬೆಳಿಗ್ಗೆ 5.35 ರಿಂದ 7.30 ರವರೆಗೆ ಪತಂಜಲಿಯ ನುರಿತ ಯೋಗ ಶಿಕ್ಷಕರಿಂದ ತರಬೇತಿ ನಡೆಯಲಿದೆ.
ಹಾಗೂ ಪಟ್ಟಣದ ಪಶು ಆಸ್ಪತ್ರೆ ಆವರಣ ಇಲ್ಲಿ ಪ್ರತಿದಿನ ಮುಂಜಾನೆ 6 ಗಂಟೆಯಿಂದ ಡಾ. ಸುಬ್ರಾಯ ಭಟ್ಟ ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ಇವರಿಂದ ತರಬೇತಿ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ವಿಶೇಷವಾಗಿ ಕೇಂದ್ರ ಸರ್ಕಾರದ ಆಯುಷ್ ಇಲಾಖೆಯ ಯೋಗ ದಿನಾಚರಣೆ ಮಾರ್ಗಸೂಚಿಯಂತೆ ತರಬೇತಿ ಹಾಗೂ ರೋಗ ಅನುಸಾರವಾಗಿ ಯೋಗ ಚಿಕಿತ್ಸಾ ತರಬೇತಿ. ದೇಹದ ತೂಕ ಕಡಿಮೆ ಮಾಡಿಕೊಳ್ಳುವುದಕ್ಕಾಗಿ, ಡಯಾಬಿಟಿಸ್, ರಕ್ತದೊತ್ತಡ, ತಲೆಶೂಲೆ ನಿವಾರಣೆಗಾಗಿ ಯೋಗ. ಯುವಕ-ಯುವತಿಯರಿಗಾಗಿ, ಯೋಗ ಶಿಕ್ಷಕರಾಗ ಬಯಸುವವರಿಗೆ, ಯೋಗಾಸನ ಸ್ಪರ್ಧೆ ಹಾಗೂ ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಲು ಸ್ಪೀಡ್ ಹಾಗೂ ಫ್ಲೆಕ್ಸಿಬಿಲಿಟಿ ಯೋಗ ತರಬೇತಿ ಜರುಗಲಿದೆ.
ಸಾರ್ವಜನಿಕರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತರಬೇತಿ ಸಪ್ತಾಹದ ಪ್ರಯೋಜನ ಪಡೆದುಕೊಳ್ಳಲು ಪತಂಜಲಿ ಯೋಗ ಸಮಿತಿಯ ಪ್ರಕಟಣೆ ತಿಳಿಸಿದೆ.
ದಿನಾಂಕ 21 ಜೂನ್ 2022 ರಂದು ಮುಂಜಾನೆ 5.45ರಿಂದ ಅಡಿಕೆ ಭವನದಲ್ಲಿ ಪತಂಜಲಿ ಯೋಗ ಸಮಿತಿ ಭಾರತ ಸ್ವಾಭಿಮಾನ ಟ್ರಸ್ಟ್ ನೇತೃತ್ವದಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಯೋಗ ಪ್ರಾತ್ಯಕ್ಷಿಕೆ ನಡೆಯಲಿದೆ. ಎಲ್ಲ ಸಾರ್ವಜನಿಕರು ಇದರಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಕೋರಲಾಗಿದೆ.
Leave a Comment