ಮುರ್ಡೇಶ್ವರ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗನೊರ್ವ ಸಮುದ್ರಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮುರುಡೇಶ್ವರ ಸಮುದ್ರ ತೀರದಲ್ಲಿ ನಡೆದಿದೆ
ಮೃತ ಪ್ರವಾಸಿಗನನ್ನು ಮಹೇಶ ಶಿವಶಂಕರಪ್ಪ ಚಿಕ್ಕಬಳ್ಳಾಪುರ ಎಂದು ತಿಳಿದು ಬಂದಿದೆ. ಈತ ತನ್ನ ಸ್ನೇಹಿತರೊಂದಿಗೆ ಸಿಗಂದೂರು, ಜೋಗ ಜಪಾಲತ ಪ್ರವಾಸ ಮುಗಿಸಿ ಮುರುಡೇಶ್ವರಕ್ಕೆ ಬಂದಿದ್ದು ನಂತರ ದೇವರ ದರ್ಶನ ಮುಗಿಸಿ ಮೂರು ಜನ ಸ್ನೇಹಿತರು ಸಮುದ್ರದಲ್ಲಿ ಈಜಲು ತೆರಳಿದ್ದಾರೆ. ಈ ಈ ವೇಳೆ ಸಮುದ್ರ ಅಲೆಗೆ ಸಿಲುಕಿದ ಮಹೇಶ ನಾಪತ್ತೆಯಾಗಿದ್ದಾನೆ ನಂತರ ಸ್ಥಳೀಯರು ನೀರಿಗೆ ಇಳಿದು ಆತನನ್ನು ಎಳೆದು ತಂದು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆಯಲ್ಲಿ ಯುವಕ ಸಾವನ್ನಪ್ಪಿದ್ದಾನೆ.
ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಭಟ್ಕಳ ಹಾಗೂ ಸುದ್ದಿಗಾಗಿ ಈ ಗ್ರುಪ್ ಸೇರಿ ; https://chat.whatsapp.com/CCdLQvKCIHJFyLu2WpU4xI
Leave a Comment