ಭಟ್ಕಳ: ಶಾಸಕರ ಅನುದಾನ ದಡಿಯಲ್ಲಿ ಮಂಜೂರಾದ 40 ಲಕ್ಷದ ಕಾಂಕ್ರೀಟ್ ರಸ್ತೆಯ ಕಾಮಗಾರಿಯ ಉಳಿದ ಕೆಲಸವನ್ನು ಶೀಘ್ರದಲ್ಲಿ ಮಾಡುವಂತೆ ಆಗ್ರಹಿಸಿ ಇಲ್ಲಿನ ತಲಾಂದ ಗ್ರಾಮದ ಆಶ್ರಯ ಕಾಲೋನಿಯ ನಿವಾಸಿಗಳು ಮುಟ್ಟಳ್ಳಿ ಪಂಚಾಯತ ಗೆ ಮುತ್ತಿಗೆ ಹಾಕಿದ್ದಾರೆ.

ಇಲ್ಲಿನ ಆಶ್ರಯ ಕಾಲೋನಿಯಲ್ಲಿ ಅಂದಾಜು 25 ವರ್ಷಗಳಿಂದ ಸ್ಥಳಿಯರು ವಾಸಿಸುತ್ತಿದ್ದು ಇಲ್ಲಿಯವರೆಗೆ ಮೂಲ ಸೌಕರ್ಯವಾದ ರಸ್ತೆಯ ಸೌಲಭ್ಯವಿಲ್ಲವಾಗಿತ್ತು. ಈ ಹಿನ್ನೆಲೆ ನಿವಾಸಿಗರು ಶಾಸಕರ ಬಳಿ ತೆರಳಿ ಮನವಿ ಮಾಡಿದ ಕಾರಣದಿಂದ ಅವರಿಗೆ ಶಾಸಕರ ಅನುದಾನದಡಿ 40 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಯನ್ನು ನಿರ್ಮಿಸಿ ಕೊಡುವುದಾಗಿ ತಲಾಂದನ ಆಶ್ರಯ ಕಾಲೋನಿಗೆ ಮಂಜುರು ಮಾಡಿ ಭೂಮಿ ಪೂಜೆಯನ್ನು ಸಹ ನಡೆಸಿದ್ದರು.
ಅದರಂತೆ ಕಾಮಗಾರಿ ಪಡೆದುಕೊಂಡ ಗುತ್ತಿಗೆದಾರರು ಕಾರ್ಯ ಆರಂಭಿಸುತ್ತಿದ್ದಂತೆ ಶಿರಾಲಿ ಮೂಲದ ವ್ಯಕ್ತಿಯೋರ್ವ ಕಾಮಗಾರಿ ಆರಂಭಿಸಲಿರುವ ರಸ್ತೆಯು ಸರ್ಕಾರ ತನಗೆ ನೀಡಿದ ತನ್ನ ಖಾಸಗಿ ಜಮೀನಾಗಿದ್ದು ಆ ಜಾಗವನ್ನು ಗುರುತಿಸಿ ತದನಂತರ ಕಾಮಗಾರಿಯನ್ನು ನಡೆಸುವಂತೆ ಪಂಚಾಯತಗೆ ಅರ್ಜಿ ನೀಡಿದ್ದ ಎಂದು ತಿಳಿದು ಬಂದಿದೆ. ಹಾಗೂ ಈ ಕುರಿತು ವಿಚಾರಣೆ ನಡೆಸಿ ಕಾಮಗಾರಿಯನ್ನು ಆರಂಭಿಸಲು ಪಂಚಾಯತ ತೀರ್ಮಾನಿಸಿ ಕೊನೆಗೆ ಕಾಮಗಾರಿಯನ್ನು ಮುಂದೂಡಿದ ಬಗ್ಗೆ ಅಸಮಾಧಾನಗೊಂಡ ಸ್ಥಳಿಯರು ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಆಗ್ರಹಿಸಿದ ಮಹಿಳೆಯರು ಸೇರಿದಂತೆ 50 ರಿಂದ 100 ಜನರು ಪಂಚಾಯತ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಈಗಾಗಲೇ ಕಾಮಗಾರಿ ಪಡೆದ ಗುತ್ತಿಗೆದಾರ ಶೇ. 75 ಪ್ರತಿ ರಷ್ಟು ಕಾಮಗಾರಿ ಮುಗಿಸಿದ್ದಾರೆ. ಆದರೆ ಸದ್ಯ ಕಾಮಗಾರಿ ಸ್ಥಗಿತಗೊಳಿಸಿದ್ದು ಇನ್ನುಳಿದ ಕಾರ್ಯ ಪೂರ್ಣಗೊಳಿಸುವಂತೆ ಸ್ಥಳೀಯರು ಪಂಚಾಯತ್ ಅಧ್ಯಕ್ಷರಲ್ಲಿ ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಪಂಚಾಯತ ಪಂಚಾಯತ ಅಧ್ಯಕ್ಷ ಶೇಷು ನಾಯ್ಕ, ಸದಸ್ಯ ಗಣಪತಿ ನಾಯ್ಕ ಜನರ ಸಮಸ್ಯೆಯನ್ನು ಆಲಿಸಿ ಕಾಂಕ್ರೆಟ್ ರಸ್ತೆ ಪೂರ್ಣಗೊಳಿಸುವುದಾಗಿ ತಿಳಿಸಿದರು ಹಾಗೂ ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾದ ಸಮಸ್ಯೆಗಳೇನಾದರು ಉದ್ಬವಿಸಿದರೆ ಸಾರ್ವಜನಿಕರು ಪಂಚಾಯತನೊಂದಿಗೆ ಸಹಕರಿಸುವುದಾಗಿ ಸ್ಥಳಿಯ ನಿವಾಸಿಗಳಾದ ರೋಕಿ ಫರ್ನಾಂಡಿಸ್, ರವಿ ನಾಯ್ಕ, ಮಾದೇವ ನಾಯ್ಕ ಸೇರಿದಂತೆ ಊರಿನ ನಾಗರಿಕರು ಆಶ್ವಾಸನೆ ನೀಡಿದರು.
ಆಕ್ರೋಶಭರಿತರಾಗಿ ಪಂಚಾಯತಗೆ ಬಂದಿದ್ದ ಆಶ್ರಯ ಕಾಲೋನಿ ನಿವಾಸಿಗಳನ್ನು ಪಂಚಾಯತ ಅಧ್ಯಕ್ಷ ಶೇಷು ನಾಯ್ಕ, ಸದಸ್ಯ ಗಣಪತಿ ನಾಯ್ಕ ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಈ ಕಾಮಗಾರಿಯ ಕುರಿತಾದ ಬೆಳವಣಿಗೆಯನ್ನು ಕಾದುನೋಡಬೇಕಾಗಿದೆ.
ಭಟ್ಕಳ ಹಾಗೂ ಸುದ್ದಿಗಾಗಿ ಈ ಗ್ರುಪ್ ಸೇರಿ ; https://chat.whatsapp.com/CCdLQvKCIHJFyLu2WpU4xI
Leave a Comment