ನಂಜನಗೂಡು (ಮೈಸೂರು ಜಿ.): ಹತ್ತು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೆಲ್ಲೂಪುರ ಗ್ರಾಮದ 35 ವರ್ಷದ ಗೃಹಿಣಿ ಕಾಡಂಚಿನಲ್ಲಿ ಪತ್ತೆಯಾಗಿದ್ದಾಳೆ. 21 ವರ್ಷ ವಯಸ್ಸಿನ ಅರ್ಚಕ ಸಂತೋಷ್ ಎಂಬಾತನ ಜೊತೆ ಪರಾರಿಯಾಗಿದ್ದ ಈಕೆ ಎರಡು ಮಕ್ಕಳ ತಾಯಿಯೂ ಹೌದು.
ಬಾಳು ಕೊಡುವುದಾಗಿ ನಂಬಿಸಿ ಕರೆದೊಯ್ದಿದ್ದ ಯುವ ಅರ್ಚಕ ಆಕೆಯೊಂದಿಗೆ ಹತ್ತು ದಿನಗಳ ಒಡನಾಟ ಬೆಳೆಸಿ ಬಳಿಕ ಕಾಡಿನಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸದ್ಯ ಗೃಹಿಣಿ ಈಗ ಅರ್ಚಕನ ಜೊತೆ ಇರಬೇಕೆಂದು ಪಟ್ಟುಹಿಡಿದಿದ್ದಾಳೆ. ಮಹದೇಶ್ವರನ ದೇವ ಸ್ಥಾನದ ಈ ಪೂಜಾರಿ ಗೃಹಿಣಿಯನ್ನು ನಂಬಿಸಿ ಆಕೆಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ.
ಮದುವೆ ಯಾಗುವುದಾಗಿ ನಂಬಿಸಿ ಕರೆದೊಯ್ದಿದ್ದ. ಹತ್ತು ದಿನಗಳ ಕಾಲ ಇಬ್ಬರೂ ಸುತ್ತಾಡಿದ ಬಳಿಕ, ಸಮಾಜ ತಮ್ಮ ಸಂಬಂಧವನ್ನು ಒಪ್ಪುವುದಿಲ್ಲ, ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ಹೇಳಿ ಈಕೆಯನ್ನು ಮಧ್ಯರಾತ್ರಿ ಸಮಯ ಕಾಡಿಗೆ ಕರೆತಂದು ಅಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.
ಕಂಗಾಲಾದ ಗೃಹಿಣಿ ಅರಣ್ಯದಲ್ಲಿ ನಡೆದು ಕಾಡಂಚಿನ ಗ್ರಾಮ ತಲುಪಿ ತನ್ನ ಕತೆ ಹೇಳಿಕೊಂಡ ಬಳಿಕ ಗ್ರಾಮಸ್ಥರು ಹುಲ್ಲಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸದ್ಯ ವಿವರ ಕಲೆ ಹಾಕಿದ್ದಾರೆ. ಮಹಿಳೆ ಸಂತೋಷ್ ಜೊತೆ ಬಾಳುತ್ತೇನೆಂದು ಹಠ ಹಿಡಿದಿದ್ದು, ಪೊಲೀಸರು ಈಗ ಪೂಜಾರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Leave a Comment